ಈ ಬಾರಿ ಅಧಿಕಾರಕ್ಕೆ ಬರದಿದ್ದರೇ ಜೆಡಿಎಸ್ ವಿಸರ್ಜನೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಸಿಂದಗಿ,ಜನವರಿ,18,2023(www.justkannada.in): ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೇ 2028ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಿಂದಗಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಬಾರಿ ಅಧಿಕಾರಕ್ಕೆ  ಬರದಿದ್ದರೇ  2028ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ. 2028ರ ಬಳಿಕ ನಿಮ್ಮ ಬಳಿ ಮತ ಕೇಳಲು ಬರಲ್ಲ. ನಮ್ಮ ತಪ್ಪಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ . ಹೆಚ್.ಡಿ ದೇವೆಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನ ಮರೆತಿಲ್ಲ. ಪಂಚರತ್ನ ಯೋಜನೆಗೆ ಜಾತಿ ಧರ್ಮ ಇಲ್ಲ.  ಈ 5 ಕಾರ್ಯಕ್ರಮಗಳು ಜಾರಿಯಾದರೇ ರಾಮರಾಜ್ಯವಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ರಾಜ್ಯದ ಜನರ ಹಣವನ್ನ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಬಿಜೆಪಿ ರೈತರಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

Key words: JDS – not -come – power – discharge-Former CM -HD Kumaraswamy.