ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ: ಎನ್ ಡಿಆರ್ ಎಫ್ ರೀತಿ ಎಸ್ ಡಿಆರ್ ಎಫ್ ರಚಿಸಲು ಸಿಎಂ ಬಿಎಸ್ ವೈ ಸೂಚನೆ….

Promotion

ಬೆಂಗಳೂರು,ನ,20,2019(www.justkannada.in): ಎನ್ ಡಿಆರ್ ಎಫ್ ರೀತಿ ಎಸ್ ಡಿಆರ್ ಎಫ್ ರಚಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು‌ ವಿಧಾನಸೌದದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾದಿಕಾರದ ಸಭೆ ನಡೆಯಿತು. ಪ್ರಾಧಿಕಾರ ರಚನೆಯಾದಾಗಿನಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಮೊದಲ ಸಭೆ ಇದಾಗಿದೆ. ಸಭೆಯಲ್ಲಿ ಎನ್ ಡಿ ಆರ್ ಎಫ್ ರೀತಿ ಎಸ್ ಡಿ ಆರ್ ಎಫ್ ರಚಿಸಬೇಕು. ಎನ್ ಡಿ ಆರ್ ಎಫ್ ಬಳಿ ಇರುವ ಎಲ್ಲಾ ರೀತಿಯ ಸವಲತ್ತುಗಳನ್ನು ಎಸ್ ಡಿ ಆರ್ ಎಫ್ ಗೆ ನೀಡಬೇಕೆಂದು ಸೂಚಿಸಿದರು.

ಎಸ್ ಡಿ ಆರ್ ಎಫ್ ಗೆ ಸಿಬ್ಬಂದಿ ಗೆ ವಿಶೇಷ ರೀತಿ ತರಬೇತಿ ನೀಡಬೇಕು. ವಿಪತ್ತು ಆದಾಗ ತಕ್ಷಣ ಸ್ಪಂದಿಸಲು ಎಲ್ಲಾ ಜಿಲ್ಲೆಗಳಲ್ಲೂ ಎಸ್ ಡಿ ಆರ್ ಎಫ್ ಸಜ್ಜಾಗಿರುವಂತೆ ತರಬೇತಿ ನೀಡಲಾಗುತ್ತದೆ. ಪ್ರವಾಹ ಪರಿಹಾರಕ್ಕಾಗಿ ಎಸ್ ಡಿ ಆರ್ ಎಫ್ ಅಡಿ ರೂ 459.93 ಕೋಟಿಗಳ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ನಡುವೆ ಪ್ರತಿ ಕುಟುಂಬಕ್ಕೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು 10,000 ಬಿಡುಗಡೆ ಮಾಡಲಾಗಿದೆ. ಈಗಾಗಲೇ 2.06 ಲಕ್ಷ ಕುಟುಂಬಗಳಿಗೆ 206.04 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ವೈ ಮಾಹಿತಿ ನೀಡಿದರು.

ಮನೆಹಾನಿಗೆ ಕೇಂದ್ರದ ಮಾರ್ಗ ಸೂಚಿ ಅನ್ವಯ ಶೇ. 15 ರಷ್ಟು ಹಾನಿಯ ಮನೆಗೆ 5200. ತೀವ್ರ ಭಾಗಶಃ ಮನೆ ಹಾನಿಗೆ ರೂ 95100 . ತೀವ್ರ ಮನೆ ಹಾನಿಗೆ 5 ಲಕ್ಷ ರೂಗಳನ್ನು ನೀಡಲಾಗಿದೆ. ಇನ್ನು ಬೆಳೆ ಹಾನಿಗೆ ಮಳೆಯಾಶ್ರಿತ ಬೆಳೆ  ಹೆಕ್ಟರ್ ಗೆ 16800 ನೀರಾವರಿ ಬೆಳೆ 23500 ವಾರ್ಷಿಕ ತೆಂಗು ಅಡಿಕೆ ಮಾವು ಇತ್ಯಾದಿಗೆ 28000 ನೀಡಲಾಗಿದೆ. ಎಸ್ ಡಿ ಆರ್ ಎಫ್ ಅಡಿಯಲ್ಲಿ ಟೈಮ್ ಟೆಂಡರ್ ಕರೆದು ಆದಷ್ಟು ಬೇಗ  ಹಾನಿಗೆ ಒಳಗಾದ ಪ್ರದೇಶಗಳನ್ನು ಸರಿ ಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಬಿಎಸ್ ವೈ ಸೂಚಿಸಿದರು.

Key words: First -meeting – State Disaster Management Authority-  CM BS yeddyurappa – SDRF