ತನ್ವೀರ್ ಸೇಠ್ ಮೇಲಿನ ಹಲ್ಲೆಗೆ ಖಂಡನೆ: ಎಸ್‌ಡಿಪಿಐ ಬ್ಯಾನ್ ಹೇಳಿಕೆ ನೀಡಿದ ಗೃಹ ಸಚಿವರ ವಿರುದ್ದ ಅಬ್ದುಲ್ ಮಜೀದ್ ಕಿಡಿ…

ಮೈಸೂರು,ನ,20,2019(www.justkannada.in):  ಶಾಸಕ ತನ್ವೀರ್‌ಸೇಠ್ ಹಲ್ಲೆ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಎಸ್‌ಡಿ‌ಪಿಐ ಹಾಗೂ ಪಿಎಫ್‌ಐ ಸಂಘಟನೆ ಹೆಸರು ಕೇಳಿಬಂದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ನಮಗೆ ಮುಖ್ಯಮಂತ್ರಿ ಸ್ಥಾನ ಕೊಟ್ರೂ ಇಂತಹ ನೀಚ ಕೆಲಸ ಮಾಡೋಲ್ಲ ಎಂದು ಹೇಳಿದ್ದಾರೆ.

ಈ ಕುರಿತು ದಿಢೀರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಶಾಸಕ ತನ್ವೀರ್‌ಸೇಠ್ ಮೇಲೆ ಮದುವೆ ಸಮಾರಂಭದಲ್ಲಿ ಹಲ್ಲೆ ಮಾಡಿರೋದು ಖಂಡನೀಯ. ಯಾರೇ ಕೃತ್ಯ ಎಸೆಗಿದ್ರೂ ಅದು ಅಕ್ಷಮ್ಯ ಅಪರಾಧವಾಗಿದೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ  ಕೋರ್ಟ್ ಗೆ ವರದಿ ಕೊಡ್ತಾರೆ. ಕೋರ್ಟ್‌ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತದೆ. ಆದ್ರೆ ಅದಕ್ಕೂ ಮೊದಲು ಕೆಲ ರಾಜಕೀಯ ವ್ಯಕ್ತಿಗಳು ತಮಗಿಷ್ಟ ಬಂದ ಹೇಳಿಕೆಗಳನ್ನ ನೀಡ್ತಿದ್ದಾರೆ. ಅವರು ಯಾರು ಅಂತ ನಾನು ಈಗ ಹೇಳುವುದಿಲ್ಲ ಎಂದರು.

ತನ್ವೀರ್‌ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಆರೋಪಿ ಫರ್ಹಾನ್ ಪಾಷ ಎಸ್ಡಿಪಿಐ ಕಾರ್ಯಕರ್ತ ಅಲ್ಲ. ಚುನಾವಣೆ ಸಂಧರ್ಭದಲ್ಲಿ ನಮ್ಮ ಪಕ್ಷಕ್ಕೆ ಕೆಲಸ ಮಾಡಿದ್ದಾನೆ. ಕೇವಲ ಎಸ್ಡಿಪಿಐನಲ್ಲಿ ಅಷ್ಟೇ ಅಲ್ಲ  ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ನಲ್ಲೂ ಕೆಲಸ ಮಾಡಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯುವಕರ ಗುಂಪು ನಮ್ಮ ಜತೆ ಕೆಲಸ ಮಾಡೋದು ಸಾಮಾನ್ಯ  ಎಂದರು.

2013-18ರಲ್ಲಿ ತನ್ವೀರ್‌ಸೇಠ್ ವಿರುದ್ಧ ಎನ್ ಆರ್ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಚುನಾವಣೆಯಲ್ಲಿ ಮಾತ್ರ ನಾನು ತನ್ವೀರ್‌ಸೇಠ್ ಅವರ ಎದುರಾಳಿ. ಅದು ಬಿಟ್ಟರೇ ಒಂದೇ ವೇದಿಕೆಯಲ್ಲಿ ಹಲವು ಬಾರಿ ಇಬ್ಬರು ಗುರ್ತಿಸಿಕೊಂಡಿದ್ದೇವೆ. ನಮಗೆ ಮುಖ್ಯಮಂತ್ರಿ ಸ್ಥಾನ ಕೊಟ್ರು ನಾವು ಇಂತಹ ನೀಚ ಕೆಲಸ ಮಾಡೋಲ್ಲ ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದರು.

ಇಂತಹ ಹೇಳಿಕೆ ಕೊಡಲು ಗೃಹ ಸಚಿವ ಬಸವರಾಜ್ ಬೊಮ್ಮಯಿ ಯಾರು.?

ಪ್ರಕರಣದಲ್ಲಿ ಎಸ್ ಡಿಪಿಐ ಸಂಘಟನೆ ಪಾತ್ರ ಸಾಭೀತಾದ್ರೆ ಬ್ಯಾನ್ ಮಾಡ್ತಿವಿ ಅನ್ನೋ ಗೃಹ ಸಚಿವರ ಹೇಳಿಕೆ ವಿಚಾರ ಕುರಿತು ಕಿಡಿಕಾರಿದ ಅಬ್ದುಲ್ ಮಜೀದ್, ಇಂತಹ ಹೇಳಿಕೆ ಕೊಡಲು ಗೃಹ ಸಚಿವ ಬಸವರಾಜ್ ಬೊಮ್ಮಯಿ ಯಾರು.? ಎಸ್ ಡಿಪಿಐ  ದೇಶದ 15 ರಾಜ್ಯಗಳಲ್ಲಿರುವ ಒಂದು ರಾಜಕೀಯ ಪಕ್ಷವಾಗಿದೆ. ಹಾಗೇನಾದ್ರೂ ಯಾವುದಾದರೂ ರಾಜಕೀಯ ಪಕ್ಷವನ್ನು ಬ್ಯಾನ್ ಮಾಡ್ಬೇಕು ಅಂದ್ರೆ ಮೊದಲು ಬಿಜೆಪಿನ ಮಾಡಬೇಕು. ಬಿಜೆಪಿ ಹಿಂದಿನಿಂದಲೂ ಹಿಂಸಾತ್ಮಕ ರಾಜಕಾರಣ ಮಾಡ್ಕೊಂಡೇ ಈ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ಡೆಲ್ಲಿ, ಮುಂಬೈ, ಗುಜರಾತ್ ಹಿಂಸಾರಾಜಕೀಯ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಶ್ರೀರಾಮನ ಹೆಸರಲ್ಲಿ ಹಿಂಸಾತ್ಮಕ ರಾಜಕೀಯ ಮಾಡ್ತಿದ್ದಾರೆ. ಯಾವುದೇ ಕಾರ್ಯಕರ್ತರ ಕ್ರಿಮಿನಲ್ ಆಕ್ಟಿವಿಟಿಗೆ ಪಕ್ಷ ಜವಾಬ್ದಾರಿ ಅಲ್ಲ ಎಂದು ಹರಿಹಾಯ್ದರು.

ಶಾಸಕರ ಮೇಲಿನ ಹಲ್ಲೆ‌ ಪ್ರಕರಣದಲ್ಲಿ ಒಂದು ಪಕ್ಷದ ವಿರುದ್ಧ ಹೇಳಿಕೆ  ನೀಡುತ್ತಿರುವುದು. ನಮ್ಮ ವಿರುದ್ದ ಮತ್ತೊಂದು ಗುಂಪಿಗೆ ಪ್ರಚೋದನೆ ಕೊಟ್ಟಂತಾಗುತ್ತದೆ. ನಾವು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದೇವೆ. ತನಿಖಾದಿಕಾರಿಗಳ ಜತೆ ನಾವು ಮಾತಾಡಿದ್ದೇವೆ. ಕಾನೂನಿನ ಪ್ರಕಾರ ಆರೋಪಿಗಳಿಗೆ ಶಿಕ್ಷೆಯಾಗಲಿ. ಇಂದಿರಾಗಾಂಧಿ ಹತ್ಯೆಗೆ ಪ್ರತಿಕ್ರಿಯೆ ಅಗಿ‌ ಸಿಖ್ಖರ ನರಮೇಧವಾಯ್ತು. ಅದಕ್ಕೆ ಸಂಪೂರ್ಣ ಕಾಂಗ್ರೆಸ್ ಪಕ್ಷವನ್ನು ಹೊಣೆ ಮಾಡೋದು ಸರಿಯಲ್ಲ. ಬಿಜೆಪಿ ಹರತಾಳು ಹಾಲಪ್ಪ ಸ್ನೇಹಿತ ಹೆಂಡತಿ ಮೇಲೆ‌ ಅತ್ಯಾಚಾರ ಮಾಡಿದ್ರು ಅಂತ ಆರೋಪ ಕೇಳಿ ಬಂತು. ಅದಕ್ಕೆ ಸಂಪೂರ್ಣ ಬಿಜೆಪಿ ಹೊಣೆ ಅನ್ನೋಕ್ಕೆ ಆಗುತ್ತಾ.? ಎಂದು ಅಬ್ದುಲ್ ಮಜೀದ್  ಪ್ರಶ್ನಿಸಿದರು.

ಎಸ್ ಡಿಪಿಐ ಮೇಲಿನ ಆರೋಪ ಸಾಬೀತಾದ್ರೆ ನಾನು ಚುನಾವಣಾ ‌ರಾಜೀಯದಿಂದ ನಿವೃತ್ತಿ ಹೊಂದುತ್ತೇ‌ನೆ. ನನ್ನನ್ನು ಮುಖ್ಯಮಂತ್ರಿ ಮಾಡಿದ್ರೂ ಈ ರೀತಿಯ ಕೆಲಸ ಮಾಡಲ್ಲ ಎಂದು  ಅಬ್ದುಲ್ ಮಜೀದ್ ಹೇಳಿದರು.

Key words: SDPI -National General Secretary- Abdul Majeed’s -statement – attack – Tanveer Seth-case