ಕಾನೂನು ಸಚಿವ ಮಾಧುಸ್ವಾಮಿ ವಜಾಗೊಳಿಸುವಂತೆ ಆಗ್ರಹ: ಮೈಸೂರಿನಲ್ಲಿ ಪ್ರತಿಭಟನೆ….

ಮೈಸೂರು,ನ,20,2019(www.justkannada.in): ಕುರುಬ ಸಮಾಜದ ವಿರುದ್ದ ಅವಹೇಳನಕರವಾಗಿ ಮಾತನಾಡಿರುವ ಕಾನೂನು ಸಚಿವ ಮಾಧುಸ್ವಾಮಿ ಅವರನ್ನ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಜಮಾಯಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು, ಸಚಿವ ಮಾಧುಸ್ವಾಮಿ ಕುರುಬ ಸಮಾಜದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈಶ್ವರಾನಂದಪುರಿ ಸ್ವಾಮೀಜಿಗಳಿಗೆ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ್ದಾರೆ. ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಮಾದು ಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಕೂಡಲ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಸಬೇಕೆಂದು ಆಗ್ರಹಿಸಿದರು.

ಜವಾಬ್ದಾರಿ ಸ್ಥಾನದಲ್ಲಿ ಇರುವ ಮಾಧುಸ್ವಾಮಿ ಹೇಳಿಕೆ ಖಂಡನಾರ್ಹ. ಸಚಿವ ಮಾಧುಸ್ವಾಮಿ ಕ್ಷಮೆ ಯಾಚಿಸಿ ಸಚಿವಸ್ಥಾನದಿಂದ ಕೆಳಗಿಳಿಯದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು  ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

Key words: Minister -Madhuswamy -demands –dismissal-Protest -Mysore