Saturday, September 26, 2026

BDA Apartments

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಇಬ್ಬರ ಹತ್ಯ...
Home Crime ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಇಬ್ಬರ ಹತ್ಯೆ.

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಇಬ್ಬರ ಹತ್ಯೆ.

ಚಿಕ್ಕಮಗಳೂರು,ಫೆಬ್ರವರಿ,20,2023(www.justkannada.in):   ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ  ಗುಂಡು ಹಾರಿಸಿ ಸವಾರರಿಬ್ಬರನ್ನ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿಲ್ಲಿ ನಡೆದಿದೆ.

ಬಾಳೆಹೊನ್ನೂರು ಬಳಿ ಚಂದ್ರುಳ್ಳಿಬಿದರೆ ಗ್ರಾಮದಲ್ಲಿ ಈ ಘಟನೆ ಡನೆದಿದೆ.  ಚಂದ್ರುಳ್ಳಿಬಿದರೆ ಗ್ರಾಮದ ಪ್ರಕಾಶ್, ಪ್ರವೀಣ್ ಮೃತರು. ಚಿಕ್ಕಮಗಳೂರು ತಾಲೂಕಿನ ಉಜ್ಜಯಿನಿ ಗ್ರಾಮದ ರಮೇಶ್​ ಎಂಬಾತನೇ  ಕೋವಿಯಿಂದ ಗುಂಡುಹಾರಿಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ​ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: firing-Two -people –  death- chikkamagalore