ರಾಜ್ಯಪಾಲರ ಭಾಷಣದಲ್ಲಿ ರಾಜಕೀಯ ಇಲ್ಲ: ಜನರ ಸಮಸ್ಯೆಗೆ ಸರ್ಕಾರದಿಂದ ಉತ್ತಮ ಸ್ಪಂದನೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಫೆಬ್ರವರಿ,20,2023(www.justkannada.in): ವಾಸ್ತವದ ಮೇಲೆ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ರಾಜಕೀಯ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ಆರ್ಥಿಕ ಹಿಂಜರಿತದ ನಡುವೆ ಸಿಎಂ ಆದೆ. ನೂರಾರು ಸವಾಲುಗಳ ಮಧ್ಯೆ ನಾನು ಸಿಎಂ ಆದೆ.   ಆರ್ಥಿಕ ಚಕ್ರ ನಿರಂತರವಾಗಿ ತಿರುಗಬೇಕು. ಆರೋಗ್ಯ ವಲಯದಲ್ಲಿ ಸುಧಾರಣೆಯಾಗಿದೆ.  ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲೂ ಕರ್ನಾಟಕ ಪುಟಿದೆದ್ದಿದೆ. ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂಧಿಸಿದೆ ಎಂದು ತಿಳಿಸಿದರು.

ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಕೇಂದ್ರದಿಂದ ಗೊಬ್ಬರ ರಾಜ್ಯದಿಂದ ಬೀಜಕ್ಕೆ ಸಬ್ಸಿಡಿ ನೀಡಲಾಗುತ್ತಿದೆ.  ರೈತಶಕ್ತಿ ಯೋಜನೆ ಮೂಲಕ  53 ಲಕ್ಷ ರೈತರಿಗೆ ಅನುಕೂಲವಾಗಿದೆ. 20 ಸಾವಿರಕ್ಕಿಂತ ಹೆಚ್ಚು ರೈತರಿಗೆ ಸಾಲಕೊಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

8 ಸಾವಿರ ಶಾಲಾ ಕೊಠಡಿ  ನಿರ್ಮಿಸಿದ್ದೇವೆ. ಯಾವ ಸರ್ಕಾರವೂ ಇಷ್ಟು ಕೊಠಡಿ ನಿರ್ಮಿಸಿಲ್ಲ.15 ಸಾವಿರ ಶಿಕ್ಷಕರನ್ನ ನೇಮಕ ಮಾಡಿದ್ದೇವೆ. ಮುಂದಿನ ವರ್ಷವೂ ಶಿಕ್ಷಕರನ್ನ ನೇಮಕ ಮಾಡುತ್ತೇವೆ.  200 ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜುಗಳ ಪುನರುಜ್ಜೀವನ ಮಾಡುತ್ತೇವೆ. ರಾಜ್ಯದಲ್ಲಿ 7ವಿವಿಗಳ ಸ್ಥಾಪನೆ ಮಾಡಿದ್ದೇವೆ.  ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಎಲ್ಲಾ ಪಠ್ಯಕ್ರಮಗಳನ್ನ ಕನ್ನಡದಲ್ಲಿ ತರಲು ನಿರ್ಧರಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಸರ್ಕಾರದ ಸಾಧನೆ ಬಿಚ್ಚಿಟ್ಟರು.

Key words: No politics – Governor’s-speech-CM-Basavaraja Bommai