ರೈತರ ಬೆಳೆಗೆ ಉತ್ತಮ ದರ ನಿಗದಿಯಾಗಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

Promotion

ಮೈಸೂರು,ಜೂನ್,17,2022(www.justkannada.in):  ರೈತರ ಬೆಳೆಗಳಿಗೆ ಪ್ರೋತ್ಸಾಹ  ನೀಡುವ ಜೊತೆಗೆ ಉತ್ತಮ ದರದೊಂದಿಗೆ ಬೆಳೆ ಖರೀದಿ ಮಾಡಿದರೆ ನೇಗಿಲಯೋಗಿ ಬದುಕು ಹಸನಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವ ವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆ ವತಿಯಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ದೇಶದಲ್ಲಿ ಕೃಷಿ ಮಾರುಕಟ್ಟೆಗಳನ್ನು ಏಕೀಕರಿಸುವುದು, ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಇಂದು ಎಪಿಎಂಸಿ ಮಾರುಕಟ್ಟೆ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಇ-ನ್ಯಾಮ್ ಪ್ಲಾಟ್ಫಾರ್ಮ್, ಫಾರ್ಮ್ ಗೇಟ್ ಆಪರೇಷನ್ ಉತ್ತೇಜಿಸಲು ಎಫ್ಪಿಒ ಪರಿಚಯಿಸಿರುವುದು ಒಳ್ಳೆಯ ಬೆಳವಣಿಗೆ. ಭಾರತ ಕೃಷಿಯ ದೇಶವಾಗಿರುವುದರಿಂದ ಕೃಷಿ ಮಾರುಕಟ್ಟೆಯನ್ನು ಬೆಳೆಸಬೇಕು. ನಿರ್ದಿಷ್ಟ ಕೃಷಿ-ಮಾರುಕಟ್ಟೆ ನಿಯಮಾವಳಿಗಳ ಪ್ರಕಾರ ನಿರ್ವಹಿಸಬೇಕು. ಅದರ ಅಡಿಯಲ್ಲಿ ಸೂಚಿಸಲಾದ ಸರಕುಗಳ ಮಾರಾಟ ಮತ್ತು ಖರೀದಿಯನ್ನು ನಿರ್ದಿಷ್ಟ ಮಾರುಕಟ್ಟೆ ಪ್ರದೇಶಗಳು ಅಥವಾ ಯಾರ್ಡ್‌ ಗಳು ಹೆಚ್ಚು ಸ್ಥಾಪನೆ ಆಗಬೇಕು ಎಂದರು.

ನಿಯಂತ್ರಿತ ಮಾರುಕಟ್ಟೆಗಳಿಗೆ ಮೂಲಸೌಕರ್ಯ ನೀಡಬೇಕು. ತಾಂತ್ರಿಕ ಸುಧಾರಣೆ ಜೊತೆಗೆ ಏಕ ಗವಾಕ್ಷಿ ಸೇವೆ ಒದಗಿಸಬೇಕು. ಸರಕುಗಳ ಆಗಮನ ಮತ್ತು ಬೆಲೆಗಳು, ವ್ಯಾಪಾರದ ಕೊಡುಗೆಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವ ಬಗ್ಗೆ ಅರಿವು ತುಂಬಾ ಮುಖ್ಯ. ಆನ್ ಲೈನ್ ಮಾರುಕಟ್ಟೆಯು ವಹಿವಾಟು ಬಗ್ಗೆಯೂ ತಿಳಿವಳಿಕೆ ಬೇಕು ಎಂದರು.

ಜಿಕೆವಿಕೆ ಕೃಷಿ ವಿವಿಯ ಕೃಷಿ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಗಣಪತಿ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸಬೇಕಾದರೆ, ಉತ್ಪಾದನೆ ಹಾಗೂ  ಮಾರುಕಟ್ಟೆ ವಿಸ್ತರಣೆ ಮಾಡಬೇಕು. ಎಂಎಸ್ ಪಿ ದರದಂತೆ ಬೆಳೆಗಳನ್ನು ಖರೀದಿ ಮಾಡಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು ಎಂದರು.

ಕೆಎಎಸ್ ಅಧಿಕಾರಿ ಡಾ.ಡಿ.ಬಿ.ನಟೇಶ್, ಪ್ರಾಧ್ಯಾಪಕಿ ಡಾ.ಎಂ.ಮೀರಾ ಸೇರಿದಂತೆ ಇತರರು ಇದ್ದರು.

Key words: Farmers-crops- Mysore university-Prof.G.Hemanth Kumar

ENGLISH SUMMARY…

A suitable price should be fixed for farmers’ crops: UoM VC
Mysuru, June 17, 2022 (www.justkannada.in): “Incentivizing and fixing a suitable price for the farmers crops will improve their lives,” observed Prof. G. Hemanth Kumar, Vice-Chancellor, University of Mysore.
He participated in a national-level seminar on the topic, “Integrating Agricultural Markets, Problems and challenges,” held at the Rani Bahaddur Auditorium in the Manasa Gangotri campus, organized by the Development Research Institute of the University of Mysore.
In his address, he expressed his view that the APMC markets, and agricultural markets should be strengthened further. “Introduction of E-Nam Platform and EPF to encourage Farm Gate Operation is a good development. Agricultural markets should be developed as India is an agricultural country. The agricultural markets should function as per regulations. More yards should be established in order to help purchase and sale of produce,” he explained.
In his address, Prof. M.S. Ganpathi, Head, Agriculture Trading Management, GKVK, said, “production should be increased and market should be extended to double the income of the farmers. Crops should be purchased as per MSP. The Union and State Governments should create an amicable environment for farmers.”
KAS Officer Dr. D.B. Natesh, Professor Dr. M. Meera and others were present.

Keywords: University of Mysore/ Farmers/ crops/ suitable price