ಯೂರೋ ಕಪ್ ಫುಟ್ಬಾಲ್: ಇಂಗ್ಲೆಂಡ್ ಮಣಿಸಿದ ಇಟಲಿ ಚಾಂಪಿಯನ್

Promotion

ಬೆಂಗಳೂರು, ಜುಲೈ 12, 2021 (www.justkannada.in): ಪ್ರತಿಷ್ಠಿತ ಯೂರೋ ಕಪ್ ಫುಟ್ಬಾಲ್ ಫೈನಲ್ ನಲ್ಲಿ ಇಟಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಪೆನಾಲ್ಟಿಗಳ ನಂತರದಲ್ಲಿ ಇಂಗ್ಲೆಂಡ್‌ ತಂಡವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಇಟಲಿ ಯುಇಎಫ್‌ಎ ಯುರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಶಿಪ್ ಗೆದ್ದಿತು.

ಭಾನುವಾರ ತಡರಾತ್ರಿ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಟಾಲಿ ತಂಡ 2ನೇ ಬಾರಿಗೆ ಚಾಂಪಿಯನ್ ಆಯಿತು.

ಇಟಲಿ 2000 ಮತ್ತು 2012 ರಲ್ಲಿ ಫೈನಲ್‌ ಪ್ರವೇಶಿಸಿದ್ದರೂ ಕ್ರಮವಾಗಿ ಫ್ರಾನ್ಸ್ ಮತ್ತು ಸ್ಪೇನ್‌ ವಿರುದ್ಧ ಸೋಲು ಕಂಡಿತ್ತು.

ಅಂದಹಾಗೆ ವೆಂಬ್ಲಿಯಲ್ಲಿ ನಡೆದ ಫೈನಲ್ ಪಂದ್ಯಾವಳಿಯನ್ನು ಅತಿ ಹೆಚ್ಚು 67,173 ಅಭಿಮಾನಿಗಳು ವೀಕ್ಷಿಸಿದ್ದರು.