ವಿಂಬಲ್ಡನ್: ನಿರೀಕ್ಷೆಯಂತೆ ಗೆದ್ದು ದಾಖಲೆ ಬರೆದ ನುವಾಕ್ ಜಾಕೋವಿಚ್

ಬೆಂಗಳೂರು, ಜುಲೈ 12, 2021 (www.justkannada.in): ಸರ್ಬಿಯಾದ ನುವಾಕ್ ಜಾಕೋವಿಚ್ ಜಯ ಗಳಿಸಿ ತಮ್ಮ 6ನೇ ವಿಂಬಲ್ಡನ್ ಟೂರ್ನಿ ಮತ್ತು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಜಾಕೋವಿಚ್ ಜಯಗಳಿಸಿ ಚಾಂಪಿಯನ್ ಆದರು.

ಫೈನಲ್ ಪಂದ್ಯದಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಜಾಕೋವಿಚ್ 6-7, 6-4, 6-4, 6-3 ನೇರ ಸೆಟ್ ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.

ಜಾಕೋವಿಚ್ ಗೆ ಇದು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, ಆ ಮೂಲಕ 20 ಗ್ರಾಂಡ್ ಸ್ಲಾಮ್ ಗೆದ್ದ ದಾಖಲೆಯನ್ನು ಜಾಕೋವಿಚ್ ಬರೆದಿದ್ದಾರೆ.