ಡಾ.ಬಿ.ಆರ್  ಅಂಬೇಡ್ಕರ್ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜದ ಸಮಾನತೆ ಸಾಧ್ಯ-ಸಚಿವ  ಡಾ. ನಾರಾಯಣಗೌಡ

ಮಂಡ್ಯ ಏಪ್ರಿಲ್, 14,2021(www.justkannada.in):  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಮಾಡುವುದರಿಂದ ಮಾತ್ರ ಪ್ರಗತಿ ಆಗುವುದಿಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಾಗ ಮಾತ್ರ ಸಮಾಜದ ಏಳಿಗೆ ಮತ್ತು ಸಮಾನತೆ ಸಾಧ್ಯ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡ ಹೇಳಿದರು.CM,B.S.Y,Statement,atrocious,Extreme,Kodihalli Chandrasekhar

ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ   ಹರಿಕಾರ ಡಾ.ಬಾಬು ಜಗಜೀವನರಾಂ ಅವರ 114ನೇ ಜನ್ಮ ದಿನಾಚರಣೆಯ ಅಂಗವಾಗಿ  ಜಿಲ್ಲಾಧಿಕಾರಿಗಳ   ಕಛೇರಿ ಮುಂಭಾಗದ ಉದ್ಯಾನವನದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಹಾಗೂ ಡಾ. ಬಾಬು ಜಗಜೀವನರಾಂ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ  ಜಿಲ್ಲೆಯ ಸುಭಾಸ್ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್  ಅವರು ಶೋಷಿತ  ಸಮುದಾಯಗಳ ಪರವಾಗಿ ಸತತ ಹೋರಾಟ ಮಾಡಿದವರು. ಶೋಷಣೆಗೆ ಒಳಗಾಗಿ ಜೀವನವೇ ಕಷ್ಟ ಎಂಬಂತಹ ಸಂದರ್ಭದಲ್ಲಿ ಶೋಷಿತರಿಗೆ ಧ್ವನಿಯಾಗಿ ನಿಂತ ಮಹಾನ್ ವ್ಯಕ್ತಿ ಬಿ.ಆರ್. ಅಂಬೇಡ್ಕರ್ ಎಂದರು.

ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಸಮಾಜದ ಏಳಿಗೆಯಲ್ಲಿ ತಮ್ಮ ಪಾತ್ರ ಏನಿರಬೇಕು ಎಂದು ಜನರಿಗೆ ಸಂವಿಧಾನ ಓದುವುದರಿಂದ ಅರ್ಥವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಎಂದರು. ಇಂದು ಇನ್ನೊಬ್ಬ ಶ್ರೇಷ್ಠ ವ್ಯಕ್ತಿಯಾದ, ಹಸಿರು ಕ್ರಾಂತಿಯ ಹರಿಕಾರರಾದ  ಬಾಬು ಜಗಜೀವನ್ ರಾಮ್ ಅವರ 114 ನೇ ಜಯಂತಿಯು ಇದೆ, ಅವರು ಕೂಡ ಶೋಷಿತರ ಹಕ್ಕಿಗಾಗಿ ಹೋರಾಟ ಮಾಡಿದವರು, ದೇಶಕ್ಕಾಗಿ ಅವರು ಮಾಡಿದ ಸೇವೆ ಅಪಾರ ಎಂದರು. ಈ ಸಂದರ್ಭದಲ್ಲಿ ಇಬ್ಬರು ಮಹನೀಯರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತ ಅವರ ಮೌಲ್ಯಗಳು ಮತ್ತು ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು ಸಚಿವ ನಾರಾಯಣಗೌಡ ಹೇಳಿದರು.

ಅಂಬೇಡ್ಕರ್ ಜಯಂತಿಯ ಪ್ರಯುಕ್ತ, ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.  ರಕ್ತದಾನ ಶಿಬಿರದಲ್ಲಿ ಜಿಲ್ಲಾಧಿಕಾರಿಗಳಾದ ಎಸ್. ಅಶ್ವತಿ ಅವರು ರಕ್ತದಾನ ಮಾಡಿ ನಂತರ ಮಾತನಾಡಿದ ಅವರು, ರಕ್ತದಾನ ಮಾಡಿ ಇತರರ ಜೀವ ಉಳಿಸಿ, ರಕ್ತದಾನ ಮಾಡಿದರೆ ಒಂದು ಜೀವ ಉಳಿಸುವ ಕೆಲಸ ನಮ್ಮದಾಗುತ್ತದೆ. ಎಲ್ಲರೂ ಸಹ ರಕ್ತದಾನ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ. ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶ ಕಂಡ ಮಹಾನ್ ಮಾನವತವಾದಿ, ಮಾನವೀಯ ತತ್ವಗಳನ್ನು ಸಮ ಸಮಾಜವನ್ನು ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದವರು. ಸಮ ಸಮಾಜವನ್ನು ನಿರ್ಮಾಣ ಮಾಡಲು ಯತ್ನಿಸಿದಂತಹ ಬಾಬಾ ಅಂಬೇಡ್ಕರ್ ಅವರ ತತ್ವಗಳನ್ನು, ಆದರ್ಶಗಳನ್ನು ನಾವೆಲ್ಲರೂ ಕೂಡ ಕೇವಲ ಒಂದು ಸಮುದಾಯವಲ್ಲ ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅದನ್ನು ಅಳವಡಿಸಿಕೊಂಡರೆ ಉತ್ತಮ ದೇಶವನ್ನು, ಉತ್ತಮ ಸಮಾಜವನ್ನು, ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಪ್ರಯತ್ನವಿರಲಿ ಎಂದು ತಿಳಿಸಿದರು.Equality - society - possible -only -Dr. BR Ambedkar-Minister - Narayana Gowda.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಶಾಸಕರಾದ ಎಂ.ಶ್ರೀನಿವಾಸ್, ವಿಧಾನ ಪರಿಷತ್‍ ಸದಸ್ಯರಾದ  ಕೆ.ಟಿ ಶ್ರೀಕಂಠೇಗೌಡ, ಎನ್. ಅಪ್ಪಾಜಿಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜುಲ್ಫಿಕರ್ ಉಲ್ಲಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ಮಂಡ್ಯದ ಉಪವಿಭಾಗಧಿಕಾರಿ ಐಶ್ವರ್ಯ, ನಗರಸಭೆ ಅಧ್ಯಕ್ಷರಾದ ಹೆಚ್.ಎಸ್.ಮಂಜು, ಜಿಲ್ಲಾ ಆರೋಗ್ಯಧಿಕಾರಿ ಡಾ. ಮಂಚೇಗೌಡ ಮತ್ತು ವಿವಿಧ ಸಂಘ ಸಂಸ್ಥೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಸತಿ ನಿಲಯಗಳ ವಿಧ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Equality – society – possible -only -Dr. BR Ambedkar-Minister – Narayana Gowda.