ನಾನು ದನದ ಮಾಂಸ ತಿನ್ನುತ್ತೇನೆ: ಆಹಾರ ಪದ್ಧತಿ ನಮ್ಮ ಹಕ್ಕು- ಮಾಜಿ ಸಿಎಂ ಸಿದ್ಧರಾಮಯ್ಯ….

ಬೆಂಗಳೂರು,ಡಿಸೆಂಬರ್,28,2020(www.justkannada.in):  ನಾನು ದನದ ಮಾಂಸ ತಿನುತ್ತೇನೆ. ಅದನ್ನ ಕೇಳಲು ನೀವು ಯಾರು.  ನನ್ನ ಆಹಾರ ಪದ್ಧತಿ ನನ್ನ ಹಕ್ಕು ಎಂದು  ಅಧಿವೇಶನದಲ್ಲೂ ನಾನು ಕೇಳಿದ್ದೇನೆ. ಈ ವಿಚಾರದಲ್ಲಿ ನಮ್ಮವರು ಗಟ್ಟಿಯಾಗಿ ಹೇಳಲ್ಲ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕೆಲವು ವಿಚಾರಗಳ ಬಗ್ಗೆ ನಮಗೆ ಮೊದಲು ಸ್ಪಷ್ಟತೆ ಇರಬೇಕು. ಗೋ ಮಾತೆಯನ್ನು ನಾವು ಪೂಜಿಸುತ್ತೇವೆ ಸರಿ. ಆದರೆ ವಯಸ್ಸಾದ ಹಸು, ಗಂಡು ಕರು ಏನ್ ಮಾಡೋದು ಹೇಳಿ? ಅವುಗಳನ್ನ ಏನ್ ಮಾಡೋದು ಹೇಳಿ? ಕಾಂಗ್ರೆಸ್ ಮುಖಂಡರು ಇದನ್ನ ಕೇಳಬೇಕು.  ಕಾಂಗ್ರೆಸ್ ನವರು ಇದನ್ನ ಸ್ಪಷ್ಟವಾಗಿ ಹೇಳಬೇಕು. ಬೇರೆ ಜಾತಿಯವರು ಏನೆಂದುಕೊಳ್ಳುತ್ತಾರೆ ಎಂದು ನಮ್ಮವರು ಮೌನಕ್ಕೆ ಶರಣಾಗುತ್ತಾರೆ. ಇದನ್ನು ಮೊದಲು ನಾವು ಬಿಡಬೇಕು. ನಮ್ಮ ಸಿದ್ಧಾಂತವನ್ನು ನಾವು ಹೇಳಬೇಕು ಎಂದು ತಮ್ಮ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

1964ರಲ್ಲಿ ಗೋ ಹತ್ಯೆ ನಿಷೇಧ ಕಾನೂನು ತಂದಿದ್ದೆವು, ಆಗ ಬಿಜೆಪಿಯವರು ಇದ್ದರಾ? ಬಿಜೆಪಿಗಿಂತ ಹೆಚ್ಚು ಕಾರ್ಯಕರ್ತರ ಬಲ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾದರೆ, ಬಡವರಿಗೆ ರೈತರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ, ದಲಿತರಿಗೆ ಹಿನ್ನಡೆಯಾದಂತೆ ಎಂದರು.eat-beef-diet-our-right-former-cm-siddaramaiah

ಹಿಂದುತ್ವ ಬಿಜೆಪಿಯ ಸ್ವತ್ತಲ್ಲ. ದೇಶಕ್ಕೆ ಇವರ ಕಾಣಿಕೆ ಏನು…? ದೇಶಕ್ಕಾಗಿ ಆಸ್ತಿ ಪ್ರಾಣ ಕಳೆದುಕೊಂಡಿದ್ದು. ಬಿಜೆಪಿಯವರು ಸಾವರ್ಕರ್ ಹಿಂದುತ್ವವಾದಿಗಳು. ನಾವು ಗಾಂಧಿ ಹಿಂದುತ್ವವಾದಿಗಳು ಎಂದು ಸಿದ್ಧರಾಮಯ್ಯ ನುಡಿದರು.

Key words: eat –beef-Diet -our right – Former CM-Siddaramaiah.