ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ…!

ಬೆಂಗಳೂರು,ಡಿಸೆಂಬರ್,28,2020(www.justkannada.in) : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ  ಮೈಸೂರು, ಮಂಡ್ಯ, ಕೊಡಗು , ಹಾಸನ, ಚಾಮರಾಜನಗರ ಜಿಲ್ಲೆಗಳ ಖಾಸಗಿಶಾಲೆಗಳ ಒಕ್ಕೂಟ (CISPMAM ) ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.ಖಾಸಗಿ ಶಾಲೆಗಳು ಕಳೆದ ಎಂಟು ತಿಂಗಳುಗಳಿಂದ ಕೋವಿಡ್-19 ಕರ್ನಾಟಕದ ಮೇಲೆ ಅಪ್ಪಳಿಸಿದ ಮೇಲೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಖಾಸಗಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದ್ದಾರೆ.

ಕಾರಣ 2020 ರ ಮಾರ್ಚ್ ತಿಂಗಳಿನಲ್ಲಿ ಕೊರೋನವೈರಸ್ ದೇಶದಾದ್ಯಂತ ವ್ಯಾಪಿಸಿದಾಗ ಶಾಲೆಗಳಿಗೆ ವಾರ್ಷಿಕ ಪರೀಕ್ಷೆಗಳ ಸಮಯ 2019- 20 ರ ವಾರ್ಷಿಕ ಶುಲ್ಕಗಳನ್ನು ಪ್ರತಿವರ್ಷದಂತೆ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳೊಳಗೆ ಪೋಷಕರು ಪಾವತಿ ಮಾಡುತ್ತಾರೆ. ದುರದೃಷ್ಟವಶಾತ್ ಕೊರೋನವೈರಸ್ ಬಂದಿದ್ದರಿಂದ, ಅದರಲ್ಲೂ ಸರ್ಕಾರ ಯಾವುದೇ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ  ಪೋಷಕರು 2019 – 20 ಶೈಕ್ಷಣಿಕ ವರ್ಷದ ಶುಲ್ಕವನ್ನು ಪಾವತಿಸಿದೆ  ಕರೋನಾ ಹೆಸರಿನಲ್ಲಿ 35%  ಶುಲ್ಕ ಹಾಗೆಯೇ  ಬಾಕಿ ಉಳಿದಿದೆ ಎಂದು ತಿಳಿಸಿದರು.

ಕಳೆದ ಎಂಟು ತಿಂಗಳಿನಿಂದ ಸರ್ಕಾರದ ಆದೇಶವಿಲ್ಲದೆ. ಪೋಷಕರು ಶುಲ್ಕವನ್ನು ಪಾವತಿಸುತ್ತಿಲ್ಲ  ಇದರಿಂದ ಖಾಸಗಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಈಗಾಗಲೇ ಸರ್ಕಾರವೇ ನಿಗದಿಪಡಿಸಿದೆ. ಶಿಕ್ಷಕರ ವೇತನ, ಕಛೇರಿ ಸಿಬ್ಬಂದಿಗಳ ವೇತನ ಹಾಗೂ ಕಟ್ಟಡದ ಬಾಡಿಗೆ ಈ ರೀತಿ ಶೇಕಡ 70% ರಿಂದ ಶೇಕಡ 100% ಅನುಪಾತದಲ್ಲಿ ಸರ್ಕಾರದ ಆದೇಶವು ಖಾಸಗಿ ಶಾಲೆಗಳಿಗೆ ಇಂತಿಷ್ಟೇ ಶುಲ್ಕವನ್ನು ತೆಗೆದುಕೊಳ್ಳಬೇಕೆಂಬ ನಿರ್ಧಾರವನ್ನು ಸರ್ಕಾರವು ಮಾಡಿದೆ. ಅದರ ಅರ್ಥ ಯಾವುದೇ ಹೆಚ್ಚಿನ ಲಾಭದಾಯಕವಲ್ಲದ ಕ್ಷೇತ್ರ ಶಿಕ್ಷಣ ವಾದ್ದರಿಂದ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಖಾಸಗಿ ಶಾಲೆಗಳು ಪಡೆದುಕೊಳ್ಳಬೇಕು. ಅದರಲ್ಲೂ ಖಾಸಗಿ ಶಾಲೆಗಳು ಶೇಕಡ 25% RTE ವಿದ್ಯಾರ್ಥಿಗಳನ್ನು ತೆಗೆದುಕೊಂಡು ಅದರ ಬಾಬ್ತಿನ ಶೇ 75%  ಶುಲ್ಕವನ್ನು ಭರಿಸಬೇಕು. ಅದರಲ್ಲೂ ಶೇಕಡಾ 75ರಷ್ಟು ಶುಲ್ಕ ವಿನಾಯಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರದ ಯೋಜನೆಗಳಿಗೆ  ಸಂಬಂಧಿಸಿದಂತೆ ನಮ್ಮ ಖಾಸಗಿ ಶಾಲೆಗಳು ಸಹಕರಿಸುತ್ತಿವೆ ಮತ್ತು ಅದನ್ನು ಪಾಲಿಸುತ್ತಿದೆ. ಹೀಗಿದ್ದೂ, ಕಳೆದ ಎಂಟು ತಿಂಗಳುಗಳಿಂದ ಖರ್ಚು ವೆಚ್ಚಗಳನ್ನು ಭರಿಸಲಾಗದೆ ಖಾಸಗಿ ಶಾಲೆಗಳು ತೊಳಲಾಡುತ್ತಿವೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಈ ದಿಸೆಯಲ್ಲಿ ಸರ್ಕಾರವು ಒಂದು ಸ್ಪಷ್ಟ ಆದೇಶವನ್ನು ನೀಡಲೇಬೇಕಾಗಿದೆ. ಗುಜರಾತ್ ಸರ್ಕಾರ ಶೇಕಡ 25% ಬಿಟ್ಟು ಉಳಿದ 75% ಶುಲ್ಕವನ್ನು ಪೋಷಕರು ಭರಿಸಬೇಕೆಂಬ ಆದೇಶವನ್ನು ನೀಡಿರುತ್ತದೆ. ಹಾಗೂ ತಮಿಳುನಾಡು ಸರ್ಕಾರ ಪ್ರಾರಂಭದಲ್ಲಿ ಶೇ 40% ಶುಲ್ಕವನ್ನು ತೆಗೆದುಕೊಳ್ಳಲು ತಿಳಿಸಿತ್ತು ನಂತರ ನವೆಂಬರ್ 19ರಂದು ಉಚ್ಚ ನ್ಯಾಯಾಲಯ ಮತ್ತೆ ಶೇಕಡ 35% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದೆ. ಇದರಿಂದ ತಮಿಳುನಾಡು ಸರ್ಕಾರವು ಸಹ ಶೇಕಡ 75% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದಂತಾಗಿದೆ ಮತ್ತು ಪಶ್ಚಿಮ ಬಂಗಾಲದ ಉಚ್ಛ ನ್ಯಾಯಾಲಯ ಶೇಕಡ 80% ಶುಲ್ಕವನ್ನು ಪಾವತಿಸುವಂತೆ ಆದೇಶ ಹೊರಡಿಸಿದೆ. ದುರದೃಷ್ಟವಶಾತ್ ಕರ್ನಾಟಕದಲ್ಲಿ ಪೋಷಕರನ್ನು ಶುಲ್ಕ ಪಾವತಿಸಲು ಒತ್ತಾಯಿಸಬಾರದು ಹಾಗೂ ಪೋಷಕರು ಹಣ ನೀಡಿದರೆ ಮಾತ್ರ ಸ್ವೀಕರಿಸಬೇಕೆಂಬ ಆದೇಶ ಹೊರಡಿಸಿರುವುದು ಪೋಷಕರನ್ನು ತಪ್ಪುದಾರಿಗೆಳೆದಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಆನ್ ಲೈನ್ ಮತ್ತು ರೆಗ್ಯುಲರ್ ಕ್ಲಾಸ್  ಎರಡು ಮಾಡಲಾಗುವುದಿಲ್ಲ ಕಾರಣ ರೆಗ್ಯುಲರ್ ಕ್ಲಾಸ್ ಮತ್ತೆ ಅಷ್ಟೇ ಆನ್ ಲೈನ್ ಕ್ಲಾಸ್ ಮಾಡಲು ಶಿಕ್ಷಕರುಗಳು ಒಪ್ಪುವುದಿಲ್ಲ ಅದು ಡಬಲ್ ಡ್ಯೂಟಿ ಆಗುತ್ತೆ. ಈಗಾಗಲೇ ಕಳೆದ ಏಳು ತಿಂಗಳಿಂದ ಆನ್ ಲೈನ್ ಶಿಕ್ಷಣ ಪಡೆದುಕೊಂಡು ಶುಲ್ಕವನ್ನು ಪಾವತಿಸದ ಪೋಷಕರುಗಳಿಗೆ  ಬಿ.ಇ.ಓ ರವರು ಟಿ.ಸಿ ನೀಡುವುದನ್ನು ನಿಲ್ಲಿಸಬೇಕು. ಅರ್ಥಿಕವಾಗಿ ಕಟ್ಟಲಾಗದಿದ್ದರೆ ಮತ್ತು ಕರೋನದಿಂದ ತೊಂದರೆಗೀಡಾಗಿದ್ದರೆ ಮಾನವೀಯತೆಯ ಆಧಾರದಲ್ಲಿ ವಿದ್ಯಾಸಂಸ್ಥೆಗಳು ಶುಲ್ಕವನ್ನು ಮನ್ನಾ ಮಾಡುತ್ತಾರೆ ಅದನ್ನು ಬಿಟ್ಟು ಬಿ.ಇ.ಓ ಕಛೇರಿಯವರು ಟಿ.ಸಿ ನೀಡಿದರೆ ಎಲ್ಲಾ ಪೋಷಕರು ಶುಲ್ಕ ನೀಡದೆ ಬಿ.ಇ.ಓ ಕಛೇರಿಯಿಂದ  ಟಿ.ಸಿ  ಪಡೆದು ಬೇರೆ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ ಎಂದು ಆಗ್ರಹಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆ ಗಳ ಖರ್ಚು ವೆಚ್ಚ  ಕೇವಲ ಶಿಕ್ಷಕರ ವೇತನಕ್ಕೆ ಮಾತ್ರ ಸೀಮಿತವಾಗಿಲ್ಲ, ಶಿಕ್ಷಕರು, ಕಛೇರಿ, ಅಕೌಂಟ್ಸ್, ಡ್ರೈವರ್ಸ್, ಸೆಕ್ಯೂರಿಟಿ, ಬಸ್ ಮದರ್, ಆಯಾ ಗಳಿರುತ್ತಾರೆ ಅವರುಗಳಿಗೂ ಕಾನೂನುಬದ್ಧ ವೇತನ ನೀಡಬೇಕು ಮತ್ತು ಅವರ ಇಎಸ್ ಐ, ಪಿಎಫ್, ಎಲೆಕ್ಟ್ರಿಕ್ ಬಿಲ್, ನೀರಿನ ಬಿಲ್, ಅಸ್ತಿ ತೆರಿಗೆ, ಬ್ಯಾಂಕ್ ಸಾಲಕ್ಕೆ ಬಡ್ಡಿ ಈ ರೀತಿ ಖರ್ಚಿನ ಬಾಬ್ತು ಬೆಳೆಯುತ್ತಲಿದೆ. ಈ ಎಲ್ಲಾ ದೃಷ್ಟಿಯಲ್ಲಿ ವಾರ್ಷಿಕ ಶುಲ್ಕವನ್ನು ಪೋಷಕರು ಕಡ್ಡಾಯವಾಗಿ ಪಾವತಿಸಿದರೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಉಳಿಯಲು ಸಹಕರಿದಂತೆ ಆಗುವುದು ಈ ಶ್ಯಕ್ಷಣಿಕ ವರ್ಷ ಮಾರ್ಚ್ ನಲ್ಲಿ ಮುಗಿಯುವುದಿಲ್ಲ ಜೂನ್ ತನಕ ನಾವು ಈ ಮಕ್ಕಳ ಶುಲ್ಕದಿಂದಲೇ ನಡೆಸಬೇಕಾಗುವುದು ಎಂದು ವಿವರಿಸಿದ್ದಾರೆ.

ಹೀಗಾಗಿ, ಸರ್ಕಾರವು  ಖಾಸಗಿಶಾಲೆಗಳ ಶುಲ್ಕವನ್ನು ಘೋಷಣೆ ಮಾಡಿದೆ ಈಗಾಗಲೇ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರಿಗೆ 50% ವೇತನವನ್ನು ಹೀಗಾಗಲೇ ನೀಡಿದ್ದೇವೆ. ಖಾಸಗಿ ಶಾಲೆಗಳಿಗೆ ದೈನಂದಿನ ಖರ್ಚಿಗಿಂತ ಕರೋನಾ ಸಮಯದಲ್ಲಿ ಹೆಚ್ಚಿನ ವೆಚ್ಚವಾಗುತ್ತಿದೆ. ಪ್ರತಿದಿನ ಆನ್ ಲೈನ್ ತರಗತಿಗಳನ್ನು ನಡೆಸಲು ಎಲ್ಲ ಶಾಲೆಗಳಿಗೂ ಪ್ರತ್ಯೇಕ  ಸ್ಟುಡಿಯೋ ನಿರ್ಮಿಸಿರುವುದು ತರಗತಿ ನಡೆಸಲು ನುರಿತ ಶಿಕ್ಷಕರ ಜೊತೆ ಇಬ್ಬರು ಅನುಭವಿ ತಂತ್ರಜ್ಞರ ಅವಶ್ಯಕತೆಯೂ ಇದೆ. ಇದರಿಂದ ಮೊದಲಿಗಿಂತಲೂ ನಮ್ಮ ಖರ್ಚು ದುಪ್ಪಟ್ಟು ಗೊಂಡಿದೆ. ಆದ್ದರಿಂದ ತಾವುಗಳು ಗಮನಹರಿಸಿ ಸಂಪೂರ್ಣ ವಾರ್ಷಿಕ ಶುಲ್ಕವನ್ನು ನಿಗದಿಪಡಿಸಿ  ಪಾವತಿಸುವಂತೆ ಆದೇಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

private-schools-Pay-fixed-fee-government-ordered-Insist

ನಮ್ಮ ಸಡಸ್ಯರು ಖಾಸಗಿ ಶಾಲೆಗಳ ಸಮಸ್ಯೆ ಗಳು ಮತ್ತು ಪ್ರಸ್ತುತ  ಪರಿಸ್ಥಿತಿ ಯನ್ನು FKCCI ಗೆ ವಿವರಿಸಿದ್ದು, ಶಿಕ್ಷಣ ಇಲಾಖೆ ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸುವಂತೆ  ಪತ್ರದ ಮೂಲಕ ಮನವಿ ಮಾಡಿದ್ದಾರೆ.

key words : private-schools-Pay-fixed-fee-government-ordered-Insist