ಮೈಸೂರಿನ ಕುಕ್ಕರಳ್ಳಿ ಕೆರೆಗೆ ಕಲುಷಿತ ನೀರಿನ ಮಿಶ್ರಣ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಮಾಧಾನ.

kannada t-shirts

ಮೈಸೂರು,ಮಾ,2,2020(www.justkannada.in): ಸಾಕಷ್ಟು ವಿದೇಶಿ ಪಕ್ಷಿಗಳು ಇಲ್ಲಿಗೆ ವಲಸೆ ಆಸರೆಯಾಗಿರುವ ಮೈಸೂರಿನ ಕುಕ್ಕರಳ್ಳಿ ಕೆರೆಗೆ ಚರಂಡಿಯಿಂದ ಉಕ್ಕುತ್ತಿರುವ ಕಲುಷಿತ ನೀರು ಸೇರಿ ಮಿಶ್ರತವಾಗುತ್ತಿದ್ದು ಇದರಿಂದಾಗಿ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.

ಚರಂಡಿಯ ಕಲುಷಿತ ನೀರು ಸೇರುತ್ತಿರುವುದರಿಂದ ಕುಕ್ಕರಳ್ಳಿ ಕೆರೆ ಗಬ್ಬುನಾರುತ್ತಿದ್ದು ಕಲುಷಿತ ನೀರಿನ ಮಿಶ್ರಣದಿಂದ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗಿದೆ. ಪ್ರತಿನಿತ್ಯ ನೂರಾರು ಜನ ಇಲ್ಲಿಗೆ ವಾಯುವಿಹಾರಕ್ಕೆ ಬರ್ತಾರೆ. ಹೀಗಾಗಿ ಕಲುಷಿತ ನೀರು ಸೇರ್ಪಡೆಯಾಗುತ್ತಿರುವುದರಿಂದ ಕೆರೆ ಗಬ್ಬು ನಾರುತ್ತಿದೆ.

ಜತೆಗೆ ಜಲಚರಗಳಿಗೂ ಇದು ಮಾರಕವಾಗಿದ್ದು, ಕಲುಷಿತ ನೀರಿನ ಮಿಶ್ರಣದಿಂದ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವಾಯುವಿಹಾರಿಗಳು ಅಧಿಕಾರಿಗಳ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು ಅಧಿಕಾರಿಗಳು ಇನ್ನಾದರೂ ಕುಕ್ಕರಳ್ಳಿ ಕೆರೆಗೆ ಚರಂಡಿ ನೀರು ಮಿಶ್ರಿತವಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

Key words: Drainage -sewage -contaminated – Mysore- Kukkaralli lake,

 

website developers in mysore