ಹೊಸ ಶೋ ಮೂಲಕ ಮತ್ತೆ ಕಿರುತರೆಗೆ ನಟ ಸೃಜನ್ ಲೋಕೇಶ್..

ಬೆಂಗಳೂರು,ಮಾ,2,(www.justkannada.in):  ಕಲರ್ಸ್ ವಾಹಿನಿಯಲ್ಲಿ ನಡೆಸಿಕೊಡಲಾಗುತ್ತಿದ್ದ ಮಜಾ ಟಾಕೀಸ್ ಮುಕ್ತಾಯಗೊಳಿಸಿರುವ ಹಿನ್ನೆಲೆ ನಟ ಸೃಜನ್ ಲೋಕೇಶ್ ಇದೀಗ ಹೊಸ ಶೋ ಮೂಲಕ ಮತ್ತೆ ಕಿರುತರೆಗೆ ಕಾಲಿಡಲಿದ್ದಾರೆ.

ಸೃಜನ್ ಜೀ ಕನ್ನಡದಲ್ಲಿ ಮತ್ತೆ ಎಂಟ್ರಿ ಕೊಡುವ ಸುದ್ದಿ ಕೊಟ್ಟಿದ್ದರು. ಆದರೆ ಯಾವ ಶೋ ಎಂದು ಹೇಳಿರಲಿಲ್ಲ. ಇದಕ್ಕೂ ಮೊದಲು ಸೃಜನ್ ಜೀ ವಾಹಿನಿಯಲ್ಲಿ ಚೋಟಾ ಚಾಂಪಿಯನ್ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮದ ಮೂಲಕ ಜೀ ಕನ್ನಡಕ್ಕೆ ರಿ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಕಾರ್ಯಕ್ರಮದ ಅಡಿಷನ್ ನಡೆಯಲಿದೆ.