ಫ್ಯಾಂಟಮ್’ ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ನಟ ಕಿಚ್ಚ ಸುದೀಪ್…

ಬೆಂಗಳೂರು,ಮಾ,2(www.justkannada.in):  ನಟ ಕಿಚ್ಚ ಸುದೀಪ್ ಸದ್ಯ ‘ಕೋಟಿಗೊಬ್ಬ-3’ ಸಿನಿಮಾ ಮುಗಿಸಿ ಇದೀಗ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಸುದೀಪ್ ಅಭಿನಯದ ಬಹುನಿರೀಕ್ಷೆಯ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಇದಾಗಿದೆ.

‘ಫ್ಯಾಂಟಮ್’ ಮೊದಲ ಶೆಡ್ಯೂಲ್ ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೆ ಕಿಚ್ಚ ಅಂಡ್ ಟೀಂ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದು ಮೊದಲ ದಿನದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಮತ್ತೆ ಬೆಂಗಳೂರಿನಲ್ಲಿ ಫ್ಯಾಂಟಮ್ ಟೀಂ. ಎರಡನೆ ಹಂತದ ಚಿತ್ರೀಕರಣ ಮಾಡಲಿದೆಯಂತೆ.