ಆತಂಕ ಬೇಡ: ದೇಶದಲ್ಲಿ ಈವರೆಗೆ ಹೊಸ ಪ್ರಭೇದದ ಕೊರೋನಾ ಸೋಂಕು ಪತ್ತೆಯಾಗಿಲ್ಲ- ಡಾ.ವಿಕೆ ಪೌಲ್….

ನವದೆಹಲಿ,ಡಿಸೆಂಬರ್,22,2020(www.justkannada.in): ವೇಗವಾಗಿ ಹರಡುವ ಬ್ರಿಟನ್ ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೋನಾ ಸೋಂಕು ಭಾರತದಲ್ಲಿ ಪತ್ತೆಯಾಗಿಲ್ಲ. ಸದ್ಯ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು  ಕೋವಿಡ್‌ ಲಸಿಕೆ ವಿಭಾಗದ ಮುಖ್ಯಸ್ಥ ಡಾ.ವಿ.ಕೆ ಪೌಲ್ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ಭಾರತದಲ್ಲಿ ಕೋವಿಡ್ 19 ಸೋಂಕಿನ ಬೆಳವಣಿಗೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್ 19 ಸ್ಪೆಷಲ್ ಟಾಸ್ಕ್ ಪೋರ್ಸ್ ನ ಡಾ.ವಿಕೆ ಪೌಲ್, ಕ್ಷಿಪ್ರವಾಗಿ ಹರಡಬಲ್ಲ ರೂಪಾಂತರ ಹೊಂದಿದ ನೂತನ ಕೋವಿಡ್ 19 ಸೋಂಕು ಬ್ರಿಟನ್ ನಲ್ಲಿ ತೀವ್ರವಾಗಿ ಹರಡುತ್ತಿದೆ. ಆದರೆ ಭಾರತದಲ್ಲಿ ಈವರೆಗೂ ಹೊಸ ಪ್ರಭೇದದ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೇ ಎಚ್ಚರಿಕೆ ಅಗತ್ಯ ಎಂದು ತಿಳಿಸಿದ್ದಾರೆ.Don't worry- No -new species - corona infection –no found – country-Dr. WK Paul.

ಬ್ರಿಟನ್‌ʼನಿಂದ ಬಂದವರ ಕುರಿತು ಮಾಹಿತಿ ಸಂಗ್ರಹಿಸಲಾಗ್ತಿದೆ. ಡಿ.5ರಿಂದ ಬಂದ ಎಲ್ಲ ಪ್ರಯಾಣಿಕರ ಮಾಹಿತಿ ಕಲೆಹಾಕಲಾಗುತ್ತಿದೆ. ಇನ್ನು ಹೊಸ ಕೊರೊನಾ ಅಷ್ಟೇನು ಮಾರಕವಲ್ಲ. ಅದು ವೇಗವಾಗಿ ಹರಡುತ್ತಿದೆ ಎಂದ ಮಾತ್ರಕ್ಕೆ ಮಾರಕ ಎಂದರ್ಥವಲ್ಲ ಎಂದು ಡಾ.ವಿ.ಕೆ ಪೌಲ್  ತಿಳಿಸಿದರು.

Key words: Don’t worry- No -new species – corona infection –no found – country-Dr. WK Paul.