ಅನರ್ಹರಿಗಾಗಿ ಪ್ರಾಣ ಕೊಡುವ ಸಿಎಂ ನಮ್ಮ ರಾಜ್ಯಕ್ಕೆ ಬೇಕಾ? ಮಾಜಿ ಸಿಎಂ ಎಚ್ಡಿಕೆ ಪ್ರಶ್ನೆ

Promotion

ಬೆಂಗಳೂರು, ನವೆಂಬರ್, 24, 2019 (www.justkannada.in):  ಆದೂ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರಿಗೆ ತಾವು ಪ್ರಾಣ ಬೇಕಾದರು ಕೊಡುವುದಾಗಿ ಹೇಳುತ್ತಿದ್ದಾರೆ. ಜನರಿಗಾಗಿ ಪ್ರಾಣ ಕೊಡಬೇಕಾದ ಇವರು, ಅನರ್ಹರಿಗಾಗಿ ಪ್ರಾಣ ಕೊಡಲು ಸಿದ್ದವಿದ್ದೇನೆ ಎನ್ನುತ್ತಿರುವ ಮುಖ್ಯಮಂತ್ರಿ ನಿಮಗೆ ಬೇಕೆ ಎಂದು ಪ್ರಶ್ನೆ ಮಾಡಿದರು.

ಬೆಂಗಳೂರು : ನಾವು ಯಾವತ್ತೂ ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಆದ್ರೇ ಸಿಎಂ ಯಡಿಯೂರಪ್ಪ ಜನರಿಗೆ ಸಿಗುತ್ತಿಲ್ಲ. ಕ್ಷೇತ್ರಗಳಿಗೆ ಅನುದಾನವನ್ನೇ ನೀಡಿಲ್ಲ.
ಯಶವಂತಪುರ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ. ಕಳೆದ ಮೂರು ದಿನಗಳಿಂದ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ತಮ್ಮ ಅಭ್ಯರ್ಥಿ ಜವರಾಯೀಗೌಡ ಪರವಾಗಿ ಮತ ಯಾಚಿಸಿದರು.
ರಾಜ್ಯದ ಜನತೆಗಾಗಿ. ಅವರ ಸಮಸ್ಯೆಗಳಿಗಾಗಿ. ಆದ್ರೇ ಅನರ್ಹರ ಗೆಲುವಿಗಾಗಿ ಪ್ರಾಣಕೊಡಲು ಸಿದ್ಧ ಎನ್ನುತ್ತಿದ್ದಾರಲ್ಲಾ ಇಂತ ಸಿಎಂ ಬೇಕಾ ನಿಮಗೆ ಎಂದು ಪ್ರಶ್ನೆ ಮಾಡಿದರು.