ದೊಡ್ಮನೆ ಮೊಮ್ಮಗಳ ಚೊಚ್ಚಲ ಸಿನಿಮಾ ಏಪ್ರಿಲ್ ಗೆ…?

Promotion

ಬೆಂಗಳೂರು,ಫೆ,25,(www.justkannada.in): .. ಡಾ. ರಾಜ್​ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್ ದಂಪತಿಯ ಮಗಳು ಧನ್ಯಾ ಅಭಿನಯದ ಚೊಚ್ಚಲ ಸಿನಿಮಾ ‘ನಿನ್ನ ಸನಿಹಕೆ’ ಏಪ್ರಿಲ್ ಗೆ ತೆರೆಗೆ ತರಲು ಚಿತ್ರತಂಡ ಲೆಕ್ಕಾಚಾರ ಹಾಕಿದೆ.

ಡಾ. ರಾಜ್​ಕುಮಾರ್​​ ಮೊಮ್ಮಕ್ಕಳಾದ ಧೀರೇನ್​ ರಾಮ್​ ಕುಮಾರ್​ ಮತ್ತು ಧನ್ಯಾ ರಾಮ್​ಕುಮಾರ್​ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋದು ಗೊತ್ತಿರುವ ವಿಚಾರ.  ಮೊದಲು ಧೀರೇನ್​ ನಟಿಸೋ ಸಿನಿಮಾ ಶುರುವಾಗಿತ್ತು. ಆದರೆ​​​ ಸಹೋದರಿ ಧನ್ಯಾ ನಟಿಸ್ತಿರೋ ಸಿನಿಮಾನೇ ಮೊದ್ಲು ರಿಲೀಸ್​ ಆಗುತ್ತಿದೆ.

ಈಗಾಗಲೇ ರೊಮ್ಯಾಂಟಿಕ್​ ಲವ್​ ಸ್ಟೋರಿ ನಿನ್ನ ಸನಿಹಕೆ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಮೇಕಿಂಗ್​ ಝಲಕ್​ ರಿವೀಲ್​ ಮಾಡಿದೆ ಚಿತ್ರತಂಡ. ಮದುವೆಯ ಮಮತೆಯ ಕರೆಯೋಲೆ ಮತ್ತು ಸಿಲಿಕಾನ್​ ಸಿಟಿ ಸಿನಿಮಾದಲ್ಲಿ ನಟಿಸಿದ್ದ ಸೂರಜ್ ಗೌಡ ನಿನ್ನ ಸನಿಹಕೆ ಚಿತ್ರದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಾ ಶೂಟಿಂಗ್​ ಮುಗಿಸಿರೋ ಚಿತ್ರತಂಡ ಏಪ್ರಿಲ್​ ವೇಳೆಗೆ ಚಿತ್ರವನ್ನ ತೆರೆಗೆ ತರೋ ಲೆಕ್ಕಾಚಾರದಲ್ಲಿದೆ.