ಹೊಸಬರ ‘ಆನೆಬಲ’ ಫೆ.28 ರಂದು ರಿಲೀಸ್…

kannada t-shirts

ಬೆಂಗಳೂರು,ಫೆ,25,(www.justkannada.in): ಜನಪದ ಕಲೆ, ಆಚರಣೆಗಳ ಕುರಿತು‌ ಹೊಸಬರೇ ನಿರ್ಮಿಸಿರುವ ಆನೆಬಲ ಇದೇ ಫೆಬ್ರವರಿ 28 ರಂದು ರಿಲೀಸ್ ಗೆ ರೆಡಿಯಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಮುದ್ದೆ ತಿನ್ನುವ ಸ್ಪರ್ಧೆ ನಡೆಯುತ್ತದೆ. ಈ ಸ್ಪರ್ಧೆಗೆ ಇಲ್ಲಿ ಅಪಾರ ಮಹತ್ವ ನೀಡಲಾಗುತ್ತದೆ. ಹೀಗಾಗಿ ಅದನ್ನೇ ಕಥಾವಸ್ತು ಮಾಡಿಕೊಂಡು ನೈಜ ಘಟನೆಗೆ ಹಾಸ್ಯ ಮತ್ತು ಗ್ರಾಮೀಣ ಟಚ್ ನೀಡಿ ‘ಆನೆಬಲ’ ಚಿತ್ರ ಮಾಡಲಾಗಿದೆ. ‘

ರಾಜೇಂದ್ರ ಸಿಂಗ್ ಬಾಬು, ರಮೇಶ್ ಅರವಿಂದ್, ಇಂದ್ರಜಿತ್ ಲಂಕೇಶ್, ಪುರುಷೋತ್ತಮ್ ಸೇರಿ ಅನೇಕ ನಿರ್ದೇಶಕರ ಜತೆ 15 ವರ್ಷ ಕೆಲಸ ಮಾಡಿರೋ ಸೂನಗಹಳ್ಳಿ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ‘ಆನೆಬಲ’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಬಂಡವಾಳ ಹೂಡಿದ್ದಾರೆ.

website developers in mysore