ಡಿಜಿಟಲ್ ಹಿಯರಿಂಗ್ ಏಡ್ ಬಳಕೆದಾರರಿಗೊಂದು ಸುದ್ದಿ: ಮೈಸೂರಿನ ಐಶ್(AIISH) ನಲ್ಲಿ ಒಂದು ದಿನದ ಕಾರ್ಯಗಾರ ….

ಮೈಸೂರು,ಫೆ,25,2020(www.justkannada.in):  ‘ವಿಶ್ವ ಶ್ರವಣ ದಿನದ ಅಂಗವಾಗಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಡಿಜಿಟಲ್ ಹಿಯರಿಂಗ್ ಏಡ್ ಬಳಕೆದಾರರಿಗಾಗಿ ಒಂದು ದಿನದ ಕಾರ್ಯಗಾರವನ್ನ ಆಯೋಜಿಸಿದೆ.

ದೊಂದಿಗೆ ಸಂಪರ್ಕ, ಆಡಿಯಾಲಜಿ ಇಲಾಖೆ ಕಾರ್ಯಾಗಾರವನ್ನು ನಡೆಸುತ್ತಿದೆ. ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಡಿಜಿಟಲ್ ಶ್ರವಣ ಸಾಧನಗಳ ಉತ್ತಮ  ಬಳಕೆ  ಕುರಿತು ಮೈಸೂರಿನ ಐಶ್ (AIISH) ನ , ಆಡಿಯಾಲಜಿ ವಿಭಾಗ ಮಾರ್ಚ್ 3 ರಂದು ಒಂದು ದಿನದ ಕಾರ್ಯಗಾರ ಆಯೋಜಿಸಿದೆ. ಆಡಿಯಾಲಜಿ ವಿಭಾಗದ ಜೆಸಿ ಬ್ಲಾಕ್ ನಲ್ಲಿ ಈ ಕಾರ್ಯಗಾರ ನಡೆಯಲಿದೆ.

ಡಿಜಿಟಲ್ ಶ್ರವಣ ಸಾಧನಗಳ  ರಕ್ಷಣೆ, ಬಳಕೆ, ತೊಂದರೆ  ಬಗ್ಗೆ ಮಾಹಿತಿಯನ್ನು ಒದಗಿಸುವುದು ಈ ಕಾರ್ಯಗಾರದ ಉದ್ದೇಶವಾಗಿದೆ. ಕಾರ್ಯಾಗಾರವನ್ನು ಮಾರ್ಚ್ 3 ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 1.15 ರ ನಡುವೆ ಮತ್ತು ಮಧ್ಯಾಹ್ನ 1.30 ರಿಂದ ಸಂಜೆ 5.15ರ ನಡುವೆ ಎರಡು ಬ್ಯಾಚ್‌ಗಳಲ್ಲಿ ನಡೆಸಲಾಗುವುದು.

ಡಿಜಿಟಲ್ ಶ್ರವಣ ಚಿಕಿತ್ಸಾ ಬಳಕೆದಾರರು ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 1.15 ರವರೆಗೆ ಹಾಜರಾಗಬಹುದು. ಅಥವಾ ಮಧ್ಯಾಹ್ನ 1.30 ರಿಂದ ಸಂಜೆ 5.15ರ ಬ್ಯಾಚ್ ನಲ್ಲಿ ಹಾಜರಾಗಬಹುದು. ಕಾರ್ಯಗಾರದಲ್ಲಿ ಪಾಲ್ಗೊಳ್ಳಲು 28.02.2020 ರೊಳಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ದೂರವಾಣಿ ಮೂಲಕ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಬಹುದು. ಕೇವಲ 50 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ದೂರವಾಣಿ ಸಂಖ್ಯೆ 0821-2502576  ಕರೆ ಮಾಡಬಹುದು.

Key words: DIGITAL HEARING AID- USERS – workshop-mysore- aiish