ರಾಜ್ಯದ ವಿವಿಧೆಡೆ ವೈದ್ಯರ ಮೇಲೆ ಹಲ್ಲೆ ಹಿನ್ನೆಲೆ: ಪ್ರತಿಭಟನೆ ನಡೆಸಲು ಐಎಂಎ ಸಂಘದಿಂದ ಪ್ಲಾನ್…?

Promotion

ಬೆಂಗಳೂರು,ಜು,23,2020(www.justkannada.in):  ಕೊರೋನಾ ಸಂಕಷ್ಟದ ವೇಳೆ ಕೆಲಸ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವ ಹಿನ್ನೆಲೆ  ಇದನ್ನ ಖಂಡಿಸಿ ರಾಜ್ಯ ಐಎಂಎ ಸಂಘ ಪ್ರತಿಭಟನೆ ನಡೆಸಲು ಪ್ಲಾನ್ ರೂಪಿಸಿದೆ ಎನ್ನಲಾಗುತ್ತಿದೆ.jk-logo-justkannada-logo

ಈ ಸಂಬಂಧ ಪ್ರತಿಕ್ರಿಯಿಸಿರುವ ಐಎಂಎ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಕೆಲಸವನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.doctors-assult-plan-ima-association-protest

ನಿನ್ನೆ ಕೆ.ಸಿ ಜನರಲ್ ಆಸ್ಪತ್ರೆ ವೈದ್ಯ ಸುರೇಶ್ ಎಂಬುವವರ ಮೇಲೆ ರೋಗಿ ಕಡೆಯವರು ಹಲ್ಲೆ ನಡೆಸಿದ್ದರು.  ಐಸಿಯು, ಬೆಡ್ ಇಲ್ಲ. ಹೀಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ರೋಗಿ ಕಡೆಯವರು ವೈದ್ಯ ಸುರೇಶ್ ಮೇಲೆ ಹಲ್ಲೆ ನಡೆಸಿದ್ದರು.  ಹೀಗೆ ಕೊರೋನಾ ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲಿನ ಹಲ್ಲೆಯನ್ನ ಐಎಂಎ ಸಂಘ ಖಂಡಿಸಿದ್ದು ಹಲ್ಲೆ ಪ್ರಕರಣ ನಿಯಂತ್ರಿಸದಿದ್ದರೇ ಪ್ರತಿಭಟನೆ ಎಚ್ಚರಿಕೆ ನೀಡಿದೆ.

Key words: doctors-assult-  Plan – IMA- Association – protest.