ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ: ನಾಲ್ಕು ಕ್ಷೇತ್ರಗಳಿಗೆ ಪ್ರತ್ಯೇಕ ಸಹಾಯವಾಣಿ  ಆರಂಭ…  

ಮೈಸೂರು,ಜು,23,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ನಾಲ್ಕು ಕ್ಷೇತ್ರಗಳಲ್ಲಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗಿದೆ.jk-logo-justkannada-logo

ಜಿಲ್ಲಾ ಉಸ್ತುವಾರಿ ಅದೇಶದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಈ ಸಹಾಯವಾಣಿಯನ್ನ ಆರಂಭಿಸಿದ್ದು 24/7 ಗಳ ಕಾಲ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ. ನಗರದ ವಾಣಿವಿಲಾಸ ನೀರು ಸರಬರಾಜು ಕೇಂದ್ರ ಅವರಣದಲ್ಲಿರುವ ಸಭಾಂಗಣದಲ್ಲಿ ಸಹಾಯವಾಣಿ ಆರಂಭವಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಸಹಾಯವಾಣಿ ನಂ ಇಲ್ಲಿದೆ ನೋಡಿ..increased-corona-mysore-helpline-start

ಕೃಷ್ಣರಾಜ ಕ್ಷೇತ್ರದ ಸಾರ್ವಜನಿಕರು ದೂರವಾಣಿ 0821 2519531, ಚಾಮರಾಜ ಕ್ಷೇತ್ರದವರು 0821 2515933, ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು 0821 2515934 ಹಾಗೂ ನರಸಿಂಹರಾಜ ಕ್ಷೇತ್ರದವರು ಸಹಾಯವಾಣಿ 0821 2515936 ನಂಬರ್ ಸಂಪರ್ಕಿಸುವುದು. ತುರ್ತು ಸಂದರ್ಭದಲ್ಲಿ ಸಮಸ್ಯೆ ಯಾದ್ರು ಮಾಹಿತಿ ನೀಡಬಹುದು ಮತ್ತು ಪಡೆಯಬಹುದಾಗಿದೆ.

Key words: Increased- Corona- Mysore-helpline -start