ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಆರೋಪ: ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು…

ಬೆಂಗಳೂರು,ಜು,23,2020(www.justkannada.in):  ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಲಾಗಿದೆ.

ಆರ್ ಟಿಐ ಕಾರ್ಯಕರ್ತ ಹನುಮೇಗೌಡ ಎಂಬುವವರು ಡಿಜಿ ಐಜಿಪಿ ಪ್ರವೀನ್ ಸೂದ್ ಅವರಿಗೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹನುಮೇಗೌಡ ದೂರು ನೀಡಿದ್ದಾರೆ.bjp-mla-murugesh-nirani-complaint-dgigp-rti-activitist

ಶಾಸಕ ಮುರುಗೇಶ್ ನಿರಾಣಿ ವಿರುದ್ದ ಹಿಂದೂ ದೇವರ ಬಗ್ಗೆ ವಾಟ್ಸಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಫಾರ್ವಡ್ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಕುರಿತು ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದ್ದರು.

Keywords: bjp –MLA-Murugesh nirani-complaint-DGIGP-RTI -Activitist