ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ.

Promotion

ನವದೆಹಲಿ,ಜುಲೈ,1,2022(www.justkannada.in): ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆಯನ್ನ ಇಡಿ ವಿಶೇಷ ಕೋರ್ಟ್ ಜುಲೈ 30ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ಈ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯನ್ನು ಆಧರಿಸಿ ಡಿ.ಕೆ ಶಿವಕುಮಾರ್‌ ಸೇರಿ ಐವರಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಇಂದು ಇಡಿ ವಿಶೇಷ ಕೋರ್ಟ್ ಮುಂದೆ ಹಾಜರಾಗಿದ್ದರು.

ಡಕೆ ಶಿವಕುಮಾ ಜಾಮೀನು ಅರ್ಜಿ ವಿಚಾರಣೆ ಜುಲೈ 30ಕ್ಕೆ ಮುಂದೂಡಿಕೆ. ಯಾವ ಕಾರಣಕ್ಕೂ ಡಿಕೆ ಶಿವಕುಮಾರ್ ಗೆ ಜಾಮೀನು ಕೊಡಬೇಡಿ ಎಂದು ಇಡಿ ಪರ ವಕೀಲರು ವಾದ ಮಂಡಿಸಿದರು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇಡಿ ಕಾಲಾವಕಾಶ ಕೋರಿದ ಹಿನ್ನೆಲೆ ವಿಚಾರಣೆಯನ್ನ ಕೋರ್ಟ್ ಜುಲೈ 30ಕ್ಕೆ ಮುಂದೂಡಿದೆ.

Key words: DK Shivakumar-bail -application -hearing -adjourned.

ENGLISH SUMMARY…

D.K. Shivakumar’s bail application hearing postponed
New Delhi, July 1, 2022 (www.justkannada.in): The Enforcement Directorate’s special court has postponed KPCC President D.K. Shivakumar’s bail application with respect to the money laundering case, to July 30.
The officers had submitted a chargesheet after investigation. The ED has issued summons to D.K. Shivakumar based on the chargesheet, following which he appeared before the ED special court today.
The hearing of bail application has been postponed to July 30. The advocate representing ED had argued not to grant bail to D.K. Shivakumar at any cost. Following submission of appeal to the ED seeking time to submit objection, the Hon’ble court has postponed it to July 30.
Keywords: KPCC President/ D.K. Shivakumar/ ED special court/ bail application/ postponed/ July 30