ದೇಶದ ಜನರ ಎದುರು ಕ್ಷಮೆಯಾಚಿಸಿ: ನೂಪುರ ಶರ್ಮಾಗೆ  ಸುಪ್ರೀಂಕೋರ್ಟ್ ತರಾಟೆ.

ನವದೆಹಲಿ,ಜುಲೈ,1,2022(www.justkannada.in):  ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನೂಪುರ್ ಶರ್ಮಾ  ಅವರಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್, ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ನೂಪುರ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿದೆ. ಲೂಸ್ ಟಾಕ್ ನಿಂದ ದೇಶಕ್ಕೆ ಬೆಂಕಿ ಬಿತ್ತು. ನೀವು ಭಾವನೆಗಳಿಗೆ ಕಿಡಿ ಹೊತ್ತಿಸಿದ್ದೀರಿ.  ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೀವೇ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದೆ.

ನೂಪುರ್ ಶರ್ಮಾ ಹೇಳಿಕೆಯಿಂದಲೇ ಉದಯಪುರದಲ್ಲಿ  ಘಟನೆ ನಡೆಯಿತು. ಬೇಜವಾಬ್ದಾರಿ ಹೇಳಿಕೆಯೇ ಘಟನೆಗೆ ಕಾರಣ. ಹೇಳಿಕೆ ಹಿಂಪಡೆಯುವುದು ಲೇಟಾಯಿತು. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ENGLISH SUMMARY…

SC asks Nupur Sharma to apologize in front of the people of the country
New Delhi, July 1, 2022 (www.justkannada.in): Expressing dissatisfaction against suspended BJP leader Nupur Sharma’s derogatory statement against prophet Mohammed, the Hon’ble Supreme Court today asked her to apologize in front of the people of the country.
In its statement, the Hon’ble SC mentioned that the safety of the people of the country has caused concern due to Nupur Sharma’s statement. The entire country is under fire due to your loose talk you have set fire to the sentiments of the people. You are the reason for whatever is happening in the country.
The Udaipur incident occurred due to Nupur Sharma’s irresponsible statement. She also delayed in withdrawing it. She should apologize in front of the people of the country for hurting the sentiments of the minorities, the court has said.
Keywords: Supreme Court/ Nupur Sharma/ apologize/ people

Key words: Apologize – people – country-Supreme Court – Nupur Sharma.