ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ ಇಳಿಕೆ.

 

ಬೆಂಗಳೂರು,ಜುಲೈ,1,2022(www.justkannada.in): ದೇಶದಲ್ಲಿ  ಅಡುಗೆ ಅನಿಲ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ ಇಳಿಕೆ  ಮಾಡಲಾಗಿದೆ. ವಾಣಿಜ್ಯ ಎಲ್ ​​ಪಿಜಿ ಸಿಲಿಂಡರ್ ಬೆಲೆ 198 ರೂ. ಇಳಿಕೆಯಾಗಿದ್ದು, ಈ ಮೂಲಕ ಬಳಕೆದಾರರಿಗೆ ಗುಡ್​ ನ್ಯೂಸ್​ ಸಿಕ್ಕಿದೆ.

ಇಂದಿನಿಂದ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆ ಜಾರಿಯಾಗಿದೆ. ಪ್ರತಿ‌ ತಿಂಗಳ‌ ಮೊದಲ ದಿನವೇ LPG ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಇಂದು ನವ ದೆಹಲಿಯಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್‌ ಗಳ ದರ 198 ರೂ. ಇಳಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ LPG ಸಿಲಿಂಡರ್ ಬೆಲೆ 2,021 ರೂ. ಆಗಿದೆ. ಕೊಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ದರ 182 ರೂ. ಕುಸಿತವಾಗಿದೆ. ಮುಂಬೈನಲ್ಲಿ 190.50 ರೂ. ಇಳಿಕೆಯಾಗಿದೆ. ಚೆನ್ನೈನಲ್ಲಿ 187 ರೂ. ಇಳಿಕೆಯಾಗಿದೆ.

ಕಳೆದ ತಿಂಗಳು ಜೂನ್‌ ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 135 ರೂ. ಕಡಿಮೆ ಮಾಡಲಾಗಿತ್ತು. ಆದರೆ, ಮೇ ತಿಂಗಳಲ್ಲಿ ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ಗಳ ಗ್ರಾಹಕರು ಎರಡು ಬಾರಿ ಆಘಾತಕ್ಕೊಳಗಾಗಿದ್ದರು. ಮೇ 7ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ನ ದರವನ್ನು 50 ರೂ. ಹೆಚ್ಚಿಸಲಾಗಿತ್ತು. ಮೇ 19ರಂದು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ನ ಬೆಲೆಯನ್ನು ಸಹ ಹೆಚ್ಚಿಸಲಾಗಿತ್ತು.

Key words: Decrease – commercial -LPG -cylinder -rate.

ENGLISH SUMMARY…

Commercial LPG cylinder price decreased by Rs. 198
Bengaluru, July 1, 2022 (www.justkannada.in): The price of commercial LPG cylinder has been decreased by Rs. 198, bringing relief to the users.
The revised price will be applicable from today itself. The prices of LPG cylinders is revised on the first day of every month.
The price of Indane LPG cylinder in Delhi has been decreased by Rs. 198. The price of 19 kg LPG cylinder in Delhi is Rs. 2,021. The price in Kolkata is reduced by Rs. 182 and Rs.190.50 in Mumbai and Rs. 187 in Chennai.
The prices of the commercial LPG cylinders were reduced by Rs. 135 in June. However, the consumers were given a shock twice in the month of May, as it was increased by Rs. 50 on May 7, and again on May 19.
Keywords: Commercial LPG cylincer/ price/ decrease