ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆಗೆ ಇಡಿ ವಿಶೇಷ ಕೋರ್ಟ್ ಮುಂದೆ ಹಾಜರಾದ ಡಿ.ಕೆ ಶಿವಕುಮಾರ್.

ನವದೆಹಲಿ,ಜುಲೈ1,2022(www.justkannada.in):  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌  ಇಂದು  ಇಡಿ ವಿಶೇಷ  ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ದೆಹಲಿಯ ಇಡಿ ವಿಶೇಷ ಕೋರ್ಟ್​​​ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣ ಕುರಿತಂತೆ ಈ ಹಿಂದೆಯೇ ತನಿಖೆ ನಡೆಸಿದ್ದ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯನ್ನು ಆಧರಿಸಿಯೇ ಡಿಕೆ ಶಿವಕುಮಾರ್ ಸೇರಿ ಐವರಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ಸಮನ್ಸ್ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಸೇರಿದಂತೆ ಐವರ ವಿಚಾರಣೆ ನಡೆಯುತ್ತಿದೆ.

ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿರುವ ಡಿ.ಕೆ ಶಿವಕುಮಾರ್, ಇಂದು ವಿಚಾರಣೆಗೆ ಕರೆದಿದ್ದಾರೆ ನನ್ನ ಜೊತೆ ಇತರರು ಬರುತ್ತಾರೆ.  ತಡವಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ . ಕೋರ್ಟ್ ಏನು ಹೇಳುತ್ತೆ ಅಂತಾ ಅನುಭವ ಇಲ್ಲ . ನಮ್ಮ ಒಂದಿಬ್ಬರು ವಕೀಲರನ್ನ ನಿಯೋಜಿಸಿಕೊಂಡಿದ್ದೇವೆ. ಕೋರ್ಟ್ ಆದೇಶದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

Key words: DK Shivakumar – ED -Special Court-hearing