ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ: ‘ಕೈ’ ನಾಯಕರ ವಿರುದ್ದ ಸತೀಶ್ ಜಾರಕಿಹೊಳಿ ಮುನಿಸು..?

Promotion

ಬೆಂಗಳೂರು,ನ,11,2019(www.justkannada.in):  ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ  ಸ್ಪೋಟಗೊಂಡಿದೆ. ಗೋಕಾಕ್ ಮತ್ತು ಕಾಗವಾಡ ಕ್ಷೇತ್ರದಲ್ಲಿ ಅನರ್ಹ ಶಾಸಕರಿಗೆ ಟಕ್ಕರ್ ಕೊಡಲು ಬಿಜೆಪಿ ಮುಖಂಡರನ್ನ ಕಾಂಗ್ರೆಸ್ ಕರೆತರಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸುತ್ತಿದ್ದರೆ ಇತ್ತ ‘ಕೈ’ ನಾಯಕರ ನಡೆಗೆ ಶಾಸಕ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ.

ನಿನ್ನೆ ಡಿ.ಕೆ ಶಿವಕುಮಾರ್ ರನ್ನ ಭೇಟಿ ಮಾಡಿದ್ದ ಬಿಜೆಪಿ ಮುಖಂಡ ರಾಜುಕಾಗೆ ಇಂದು ಸಿದ್ಧರಾಮಯ್ಯರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ರಾಜುಕಾಗೆ ಮತ್ತು ಅಶೋಕ್ ಪೂಜಾರಿ ಅವರನ್ನ ಕಾಂಗ್ರೆಸ್ ಗೆ ಕರೆ ತರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇತ್ತ ಜಾರಕಿಹೊಳಿ ಕುಟುಂಬದವರನ್ನ ಬಿಟ್ಟು ಬೇರೆಯವರಿಗೆ ಮಣೆ ಹಾಕಲು  ಮುಂದಾಗಿರುವ ಕಾಂಗ್ರೆಸ್ ನಾಯಕರ ವಿರುದ್ದ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿನ್ನೆ ಮತ್ತು ಇಂದಿನ ಕಾಂಗ್ರೆಸ್ ಸಭೆಯಲ್ಲಿ ಸತೀಶ್ ಜಾರಕಿಹೊಳಿ ದೂರ ಉಳಿದಿದಿದ್ದಾರೆ ಎಂದು ಹೇಳಲಾಗುತ್ತಿದೆ.

Key words: Disgruntled -again – Belgaum -District Congress-Satish jarakiholi- umbrage