Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅನ್ನಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ: ಅವನೊಬ್ಬ ಕಟುಕ,ಕಂತ್ರಿ- ಎಂಟಿಬಿ ನಾಗರಾಜ್ ವಿರುದ್ದ ಅವರ...

ಅನ್ನಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ: ಅವನೊಬ್ಬ ಕಟುಕ,ಕಂತ್ರಿ- ಎಂಟಿಬಿ ನಾಗರಾಜ್ ವಿರುದ್ದ ಅವರ ಸಹೋದರ ವಾಗ್ದಾಳಿ….

ಬೆಂಗಳೂರು, ನ.11,2019(www.justkannada.in): ಅನ್ನಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ:  ಅವನೊಬ್ಬ ಕಟುಕ,ಕಂತ್ರಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ದ ಅವರ ಸಹೋದರ ಪಿಳ್ಳಣ್ಣ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮದ ಜತೆ ಮಾತನಾಡಿ ಸಹೋದರ ಎಂಟಿಬಿ ನಾಗರಾಜ್ ವಿರುದ್ದ ಅಕ್ರೋಶ ಹೊರ ಹಾಕಿದ ಪಿಳ್ಳಣ್ಣ,  ಈ ಮೊದಲು ಸಿದ್ದರಾಮಯ್ಯ ನನ್ನ ಎದೆಯಲ್ಲಿದ್ದಾರೆ ಎಂದು ಎಂಟಿಬಿ  ಹೇಳಿದ್ದನು. ಅನಂತರ ಜನರನ್ನು ನನ್ನ ಎದೆಯಲ್ಲಿಟ್ಟುಕೊಂಡಿದ್ದೇನೆ  ಎಂದಿದ್ದನು. ಈಗ ಯಡಿಯೂರಪ್ಪ ಅವರನ್ನು ಎದೆಯಲ್ಲಿಟ್ಟುಕೊಂಡಿರುವುದಾಗಿ ಜನರನ್ನು ಮರಳು ಮಾಡುತ್ತಿದ್ದಾನೆ. ಆತನಿಗೆ ಮಾನ, ಮರ್ಯಾದೆ, ನಾಚಿಕೆ ಯಾವುದೂ ಇಲ್ಲ.  ಅವನ ಜತೆ ಹುಷಾರಾಗಿರು. ಇಲ್ಲದಿದ್ದರೇ ನಿನ್ನನ್ನೇ ಸಂಬಳಕ್ಕೆ ಇಟ್ಟುಕೊಳ್ಳುತ್ತಾನೆ ಎಂದು ನಮ್ಮ ತಂದೆ ಹೇಳಿದ್ದರು ಎಂದು ಹರಿಹಾಯ್ದರು.

ಕುರಿ ಕಡಿಯುವವನು ಕೂಡ ಒಂದು ಸಾರಿ ಯೋಚನೆ ಮಾಡಿ ಕಡಿಯುತ್ತಾನೆ. ಆದರೆ ಎಂಟಿಬಿ ನಾಗರಾಜ್  ಯೋಚನೆಯನ್ನೂ ಮಾಡದೆ ಕಡಿದು ಬಿಡುತ್ತಾನೆ. ಆತನಿಗಾಗಿ ಹೋರಾಟ ಮಾಡಿ ಕಷ್ಟಪಟ್ಟು ಗೆಲ್ಲಿಸಿದವು. ಆದರೆ  ಎಂಟಿಬಿ ನಾಗರಾಜ್.ಅನ್ನ ಕೊಟ್ಟ ಪಕ್ಷಕ್ಕೆ ಚೂರಿ ಹಾಕಿ ದ್ರೋಹ ಬಗೆದಿದ್ದಾನೆ ಎಂದು ಎಂಟಿಬಿ ನಾಗರಾಜ್ ಸಹೋದರ ಪಿಳ್ಳಣ್ಣ ಕಿಡಿಕಾರಿದರು.

Key words: Bangalore- disqualified MLA- MTB nagaraj-brother- outrage