Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅವರು ಒಪ್ಪಿದ ಮೇಲೆಯೇ ನಾನು ರಾಜೀನಾಮೆ ನೀಡಿದ್ದೆ: ‘ಕೈ’ ಜತೆ ಶರತ್ ಬಚ್ಚೇಗೌಡ ಒಳ ಒಪ್ಪಂದ-...

ಅವರು ಒಪ್ಪಿದ ಮೇಲೆಯೇ ನಾನು ರಾಜೀನಾಮೆ ನೀಡಿದ್ದೆ: ‘ಕೈ’ ಜತೆ ಶರತ್ ಬಚ್ಚೇಗೌಡ ಒಳ ಒಪ್ಪಂದ- ಎಂಟಿಬಿ ನಾಗರಾಜ್ ಹೊಸಬಾಂಬ್…

ಬೆಂಗಳೂರು,ನ,11,2019(www.justkannada.in0):  ಹೊಸಕೋಟೆ ಉಪಚುನಾಣೆ ಹಿನ್ನೆಲೆ ಬಿಜೆಪಿಯಲ್ಲಿ ಬಂಡಾಯವೆದ್ದಿರುವ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ವಿರುದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.

ನಾನು ಬಿಜೆಪಿಗೆ ಬರಲು ಅವರು ಒಪ್ಪಿಗೆ ನೀಡಿದ ಮೇಲೆಯೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ.ಆದರೆ ಈಗ ಅವರು ಉಲ್ಟಾ ಹೊಡೆದಿದ್ದಾರೆ. ಶರತ್ ಬಚ್ಚೇಗೌಡ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೊಸಬಾಂಬ್ ಸಿಡಿಸಿದ್ದಾರೆ.

ಹೊಸಕೋಟೆಯಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ನಾನು ಬಿಜೆಪಿಗೆ ಬರಲು ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲೇ ಬಚ್ಚೇಗೌಡರು ಒಪ್ಪಿಗೆ ಸೂಚಿಸಿದ್ದರು.  ಶರತ್ ಬಚ್ಚೇಗೌಡರಿಗೆ ಎಂಎಲ್ ಸಿ ಅಥವಾ ದೊಡ್ಡ ಬಳ್ಳಾಪುರ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದರು. ಅವರು ಒಪ್ಪಿದ ಮೇಲೆಯೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಆದರೆ ಈಗ ಅವರು ಉಲ್ಟಾ ಹೊಡೆದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಹಾಗೆಯೇ ಶರತ್ ಬಚ್ಚೇಗೌಡ ಕಾಂಗ್ರೆಸ್ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಶರತ್ ಗೆಲ್ಲಬೇಕು. ಇಲ್ಲ ಕಾಂಗ್ರೆಸ್ ಗೆಲ್ಲಬೇಕು ಎಂಟಿಬಿ ಸೋಲಲೇಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದರು.

Key words: resigned –agreed-Sharat Bachegwoda- MTB Nagaraj