ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಬಗ್ಗೆ ಯೋಚಿಸದಿರಿ ಎಂದು ಧೋನಿಗೆ ಟ್ವೀಟ್ ಮಾಡಿದ ಗಾಯಕಿ ಲತಾ ಮಂಗೇಶ್ಕರ್

ಮುಂಬೈ:ಜುಲೈ-11:(www.justkannada.in) ಸೆಮಿಫೈನಲ್ ನಲ್ಲಿ ಸೋತು ವಿಶ್ವಕಪ್ ನಿಂದ ಭಾರತ ಹೊರ ಬಂದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮಾಡಿರುವ ಟ್ವೀಟ್ ಒಂದು ಈಗ ಭಾರೀ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ನಮಸ್ಕಾರ ಎಂ.ಎಸ್ ಧೋನಿ ಜಿ ನೀವು ನಿವೃತ್ತಿ ಹೊಂದಲು ಬಯಸುತ್ತೀರಿ ಎಂದು ನಾನು ಕೇಳಿದ್ದೇನೆ. ದಯವಿಟ್ಟು ಆ ರೀತಿ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನೀವು ನಿವೃತ್ತಿಯ ಬಗ್ಗೆ ಯೋಚಿಸಬಾರದು ಎಂಬುದು ನನ್ನ ವೈಯಕ್ತಿಕ ಮನವಿ” ಎಂದು ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಟ್ವೀಟ್ ಗೆ ಹಲವರು ಕಮೆಂಟ್ ಮಾಡಿದ್ದು, ಲತಾ ಜಿ ತಾವು ಇಡೀ ದೇಶದ ಮನ್ ಕಿ ಬಾತ್ ಹೇಳಿದ್ದೀರಿ, ಇದನ್ನು ನಾವು ಲತಾ ಜಿ ಅವರ ಧ್ವನಿಯಲ್ಲಿ ಓದಿದೆವು. ಧೋನಿ ದ್ವೇಷಿಗಳಿಗೆ ಇನ್ನು ಮುಂದೆ ಲತಾ ಫೇಲೂರ್ ಗಾಯಕಿ. ಲತಾ ಜಿ ಹೇಳಿರುವ ಕಾರಣ ಇನ್ನೂ ಸ್ವಲ್ಪ ಸಮಯ ಆಡು. ಲೆಜೆಂಡ್ ಒಬ್ಬರು ಮಾತ್ರ ಈ ರೀತಿ ಹೇಳಲು ಸಾಧ್ಯ” ಎಂದಿದ್ದಾರೆ.

ಇನ್ನು ಧೋನಿ ನಿವೃತ್ತಿ ಬಗ್ಗೆ ಬುಧವಾರ ನಡೆದ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಧೋನಿ ನಿವೃತ್ತಿಯ ಬಗ್ಗೆ ನಮ್ಮ ಬಳಿ ಏನೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಬಗ್ಗೆ ಯೋಚಿಸದಿರಿ ಎಂದು ಧೋನಿಗೆ ಟ್ವೀಟ್ ಮಾಡಿದ ಗಾಯಕಿ ಲತಾ ಮಂಗೇಶ್ಕರ್
Dhoni, desh ko aapke khel ki zaroorat hai. Lata Mangeshkar asks MS to not retire with moving post