ಮೈಸೂರಲ್ಲಿ ಡಾಲಿಯ ‘ರತ್ನನ್ ಪ್ರಪಂಚ’ ಶೂಟಿಂಗ್ !

Promotion

ಬೆಂಗಳೂರು, ನವೆಂಬರ್ 10, 2020 (www.justkannada.in): ಮೈಸೂರಿನಲ್ಲಿ ಇಂದಿನಿಂದ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರಿಕರಣ ಆರಂಭವಾಗಲಿದೆ. ರತ್ನನ್ ಪ್ರಪಂಚದಲ್ಲಿ ರತ್ನಾಕರನಾಗಿ ಡಾಲಿ ಕಾಣಿಸಿಕೊಳ್ಳಲಿದ್ದಾರೆ.

ಪೋಸ್ಟರ್ ಮೂಲಕವೆ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ, ‘ದಯವಿಟ್ಟು ಗಮನಿಸಿ’ ಚಿತ್ರದ ನಿರ್ದೇಶಕರಾದ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ.
ಪೋಸ್ಟರ್ ಮೂಲಕವೆ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ, ‘ದಯವಿಟ್ಟು ಗಮನಿಸಿ’ ಚಿತ್ರದ ನಿರ್ದೇಶಕರಾದ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ.

‘ಕೆಆರ್‌ಜಿ ಸ್ಟುಡಿಯೋಸ್‌’ನ ಕಾರ್ತಿಕ್ ಗೌಡ ಹಾಗೂ ‘ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’ ಚಿತ್ರದ ನಿರ್ದೇಶಕ ಯೋಗಿ ಜಿ. ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಶ್ರೀಶ ಕುದುವಳ್ಳಿ ಸಿನಿಮಾಟೋಗ್ರಫಿ ಮತ್ತು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ನಂಜಯ್ ಗೆ ಜೋಡಿಯಾಗಿ ರೆಬಾ ಮೋನಿಕಾ ಜಾನ್ ಕಾಣಿಸಿಕೊಳ್ಳುತ್ತಿದ್ದಾರೆ.