ನೂತನ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ: ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ…

ಚಂಡೀಗಢ,ನವೆಂಬರ್,26,2020(www.justkannada.in):  ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಪಂಜಾಬ್ ಸೇರಿ ಹಲವು ರಾಜ್ಯಗಳ ರೈತರು ದೆಹಲಿ ಚಲೋ ನಡೆಸುತ್ತಿದ್ದು, ಈ ಅಂಗವಾಗಿ ಹರಿಯಾಣದ ಅಂಬಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ವಿರೋಧಿಸಿ ದೆಹಲಿ ಚಲೋ ಭಾಗವಾಗಿ ಪಂಜಾಬ್ ನಿಂದ ಟ್ಯಾಕ್ಟರ್ ಇತರೇ ವಾಹನಗಳ ಮೂಲಕ ಹರಿಯಾಣದ ಗಡಿಯತ್ತ ರೈತರು ಆಗಮಿಸಿದ್ದರು. ಈ ವೇಳೆ ಪ್ರತಿಭಟನಾ ನಿರತ ರೈತರುಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಬ್ಯಾರಿಕೇಡ್‌ ಗಳನ್ನು ತಳ್ಳಿದ್ದಾರೆ. ಈ ವೇಳೆ ಹರಿಯಾಣ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆ.delhi-chalo-opposes-new-agriculture-bill-protest-panjab-farmer-police

ಕೃಷಿ ನೀತಿ ವಿರೋಧಿಸಿ ರಾಜಸ್ತಾನ, ಕೇರಳಾ, ಪಂಜಾಬ್ ಉತ್ತರ ಪ್ರದೇಶದ ರೈತರು ನಡೆಸುತ್ತಿರುವ ಪ್ರತಿಭಟನೆ ಇದಾಗಿದೆ.  ಈ ನಡುವೆ  ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಬ್ಯಾರಿಕೇಡ್ ತಳ್ಳಿ ಪ್ರತಿಭಟನೆಗೆ ಮುಂದಾದರು. ಹಾಗೆಯೇ ಬ್ಯಾರಿಕೇಡ್ ಗಳನ್ನ ನದಿಗೆ ಎಸೆಯಲು ಪ್ರತಿಭಟನಾಕಾರರು ಮುಂದಾಗಿದ್ದು ಈ ವೇಳೆ ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಪೊಲೀಸರು ಆಶ್ರುವಾಯು ಪ್ರಯೋಗಿಸಿದ್ಧಾರೆ ಎನ್ನಲಾಗಿದೆ.

English summary…

Delhi chalo opposing new agriculture bill: Teargas on protesting farmers
Chandigarh, Nov. 26, 2020 (www.justkannada.in): The police had to use teargas against the farmers who were protesting against the Govt. of India’s new agriculture bill at Ambala in Haryana.
The incident took place at Shambu village on the border of Punjab-Harayana when the protesting farmers attempted to barge ahead by pushing the barricades put up by the police into the nearby tank. Farmers in Rajasthan, Kerala, Punjab and other states are protesting against the Govt. of India’s new agriculture bill.delhi-chalo-opposes-new-agriculture-bill-protest-panjab-farmer-police
Keywords: Chandigarh-farmers-teargas-new agriculture bill-Govt. of India

Key words: Delhi Chalo -opposes –new- agriculture bill-protest-panjab-farmer-police