ದೀಪಿಕಾ ಪಡುಕೊಣೆ ಇನ್’ಸ್ಟಾಗ್ರಾಂ, ಟ್ವಿಟ್ಟರ್ ಪೋಸ್ಟ್ ಡಿಲಿಟ್ ಮಾಡಿದ್ದೇಕೆ?!

Promotion

ಬೆಂಗಳೂರು, ಜನವರಿ 03, 2020 (www.justkannada.in): ನಟಿ ದೀಪಿಕಾ ಪಡುಕೋಣೆ ತಮ್ಮ ಇನ್’ಸ್ಟಾಗ್ರಾಂ, ಟ್ವಿಟ್ಟರ್ ಖಾತೆಯ ಪೋಸ್ಟ್ ಗಳೆಲ್ಲವನ್ನೂ ಡಿಲೀಟ್ ಮಾಡಿದ್ದಾರೆ.

ಪ್ರತಿ ಸಿನಿಮಾದಲ್ಲಿ ನಟಿಸಿದ ಬಳಿಕ ಆ ಸಿನಿಮಾದ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿದ್ದ ಈ ನಟಿ ಇದೀಗ ಒಮ್ಮೆಲೆ ತನ್ನ ಖಾತೆಯಲ್ಲಿರುವ ಎಲ್ಲಾ ಪೋಸ್ಟ್ ಗಳನ್ನು ಡಿಲಿಟ್ ಮಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ನಟಿ ದೀಪಿಕಾ ಅವರ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಟ್ಟೀಟರ್ ಮೂಲಕ ಹಂಚಿಕೊಂಡಿದ್ದು, ದೀಪಿಕಾ ಹೀಗೆ ಮಾಡಿದ್ದಾರೂ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.