ದೀಪಿಕಾ ಪಡುಕೋಣೆ ‘ಚಪಾಕ್​’ ಟ್ರೇಲರ್’ಗೆ ಮೆಚ್ಚುಗೆಯ ಮಹಾಪೂರ

Promotion

ಮುಂಬೈ, ಡಿಸೆಂಬರ್ 11, 2019 (www.justkannada.in): ದೀಪಿಕಾ ಪಡುಕೋಣೆ ನಟಿಸುತ್ತಿರುವ ‘ಚಪಾಕ್​’ ಎಂಬ ಸಿನಿಮಾದ ಟ್ರೇಲರ್ ರಿಲೀಸ್​​ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ದೆಹಲಿಯಲ್ಲಿ 2005ರಲ್ಲಿ ಲಕ್ಷ್ಮಿ ಎಂಬುವವರ ಮೇಲೆ ಆಕೆ ಪರಿಚಯದವರೇ ಆಯಸಿಡ್ ದಾಳಿ ಮಾಡಿದ್ದರು. ಇದಾದ ಮೇಲೆ ತನ್ನ ಜೀವನಕ್ಕಾಗಿ ಲಕ್ಷ್ಮಿ ಅಗರ್ವಾಲ್​​​ ತುಂಬಾ ಹೋರಾಟ ಮಾಡಿದ್ದರು.

ನ್ಯಾಯಕ್ಕಾಗಿ ಹೋರಾಟ ಮಾಡಿದ ಲಕ್ಷ್ಮಿ ಜೀವನವನ್ನೇ ಆಧಾರವಾಗಿಟ್ಟುಕೊಂಡು ಚಪಾಕ್​​ ಸಿನಿಮಾವನ್ನು ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತನ್ನ ಅರ್ಧ ಮುಖಕ್ಕೆ ಆಯಸಿಡ್​​ ದಾಳಿಗೊಳಗಾದ ರೀತಿ ಮೇಕಪ್​ ಮಾಡಿಕೊಂಡು ನಟಿಸಿದ್ದಾರೆ.