ಈ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ‘ಕುರುಕ್ಷೇತ್ರ’ !

ಬೆಂಗಳೂರು, ಡಿಸೆಂಬರ್ 11, 2019 (www.justkannada.in): ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಈ ವರ್ಷದ ದೊಡ್ಡ ಹಿಟ್ ಆಗಿದೆ. ಮಾಹಿತಿ ಪ್ರಕಾರ 75 ಕೋಟಿ ಕಲೆಕ್ಷನ್ ಮಾಡಿದೆ.
ಇದನ್ನು ಕೇಳಿ ನವರಸ ನಾಯಕ ಜಗ್ಗೇಶ್ ಹಿಗ್ಗಿದ್ದಾರೆ.

‘ಕುರುಕ್ಷೇತ್ರ’ ಕಲೆಕ್ಷನ್ ಮೊತ್ತವನ್ನು ತಿಳಿಸಿದ ಜಗ್ಗೇಶ್ ಸಿನಿಮಾದ ಯಶಸ್ಸು ಕಂಡು ಖುಷಿಯಾಗಿದ್ದಾರೆ.
ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿದ್ದು, ದರ್ಶನ್ ನನಗೆ ತಾನೇ ಬಂದು ಯಾವ ಸಿನಿಮಾವನ್ನು ನೋಡು ಎಂದು ಹೇಳಿರಲಿಲ್ಲ. ಆದರೆ, ಕುರುಕ್ಷೇತ್ರ ನೋಡು ಎಂದು ಹೇಳಿದ್ದ. ಅವನಿಗೆ ಅಷ್ಟೊಂದು ಆತ್ಮವಿಶ್ವಾಸ ಇತ್ತು ಎಂದಿದ್ದಾರೆ

ಅಂದಹಾಗೆ, ‘ಕುರುಕ್ಷೇತ್ರ’ ಸಿನಿಮಾ ಇದೇ ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.