ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ: ಎಲ್ಲರಿಗೂ ಧನ್ಯವಾದ ಸಮರ್ಪಿಸಿದ ಅಶ್ವತ್ ನಾರಾಯಣ್

ಬೆಂಗಳೂರು,ನವೆಂಬರ್,12,2022(www.justkannada.in):  ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಪ್ರತಿಷ್ಠಾಪನೆ ಮತ್ತು ಯಶಸ್ವಿ ಲೋಕಾರ್ಪಣೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣಗೊಳಿಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ನಿರ್ಗಮಿಸಿದ ನಂತರ ಸಚಿವರು, ಸಭೆಗೆ ಆಗಮಿಸಿದ್ದ ಭಾರೀ ಜನಸ್ತೋಮದ ಬಳಿಗೆ ತೆರಳಿ, ಕೃತಜ್ಞತೆ ವ್ಯಕ್ತಪಡಿಸಿದರು. ಶುಕ್ರವಾರದ ಸಭೆಗೆ ಅಂದಾಜು ನಾಲ್ಕು ಲಕ್ಷಕ್ಕಿಂತ ಹೆಚ್ಚು ಜನ ಆಗಮಿಸಿದ್ದರು.

ಉತ್ಸಾಹದಿಂದ ಬಂದಿದ್ದ ಜನರನ್ನು ಭೇಟಿಯಾದ ಅವರು, ಊಟ-ತಿಂಡಿಯ ಆತಿಥ್ಯದ ಬಗ್ಗೆ ಖುದ್ದಾಗಿ ವಿಚಾರಿಸಿದರು. ಅಲ್ಲದೆ, ಆಹಾರವನ್ನು ಸಿದ್ಧಪಡಿಸಿದ ಪಾಕಶಾಲೆ ಮತ್ತು ವಿತರಿಸಿದ ಮಳಿಗೆಗಳಿಗೆ ತೆರಳಿ, ಬಾಣಸಿಗರು ಹಾಗೂ ಅವರ ತಂಡಕ್ಕೂ ತಮ್ಮ ಮೆಚ್ಚುಗೆ ತಿಳಿಸಿದರು.

ಇದಲ್ಲದೆ, ಪ್ರತಿಮೆಯ ಕಾರ್ಯದಲ್ಲಿ ನಿರತರಾಗಿದ್ದ ಮತ್ತು ಸಾರ್ವಜನಿಕ ಸಭೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದವರಿಗೂ ಸಚಿವ ಅಶ‍್ವಥ್ ನಾರಾಯಣ್ ತಮ್ಮ ವಂದನೆಗಳನ್ನು ಸಲ್ಲಿಸಿ, ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆದಿದ್ದರಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಸಹಕಾರವಿದೆ ಎಂದರು.

“ಕಳೆದ ಎರಡು ವರ್ಷದಿಂದ ನಾನು ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಪ್ರತಿಮೆಯ ಲೋಕಾರ್ಪಣೆ ಯೊಂದಿಗೆ ಇದು ಸಂಪನ್ನಗೊಂಡಿದ್ದು, ನನ್ನಲ್ಲಿ ಧನ್ಯತೆಯ ಭಾವನೆ ಮೂಡಿಸಿದೆ. ನನ್ನ ಮೇಲೆ ವಿಶ್ವಾಸ ಇಟ್ಟು ಹೊಣೆ ನೀಡಿದ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾರ್ಗದರ್ಶನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಎಲ್ಲರನ್ನೂ ನೆನೆಯುತ್ತೇನೆ ಎಂದು ಅಶ್ವತ್ ನಾರಾಯಣ್ ನುಡಿದರು.

ಈ ಪ್ರತಿಮೆಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆಯೆಂದು ವಿಶ್ವ ದಾಖಲೆ ಸೃಷ್ಟಿಸಿದೆ. ಬೆಂಗಳೂರಿನ ಪಾಲಿಗೆ ಇದು ಮುಂದಿನ ದಿನಗಳಲ್ಲಿ ಹೆಗ್ಗುರುತಾಗಿ, ಜನರನ್ನು ಆಕರ್ಷಿಸಲಿದೆ. ಬೆಂಗಳೂರಿನ ಯಶೋಗಾಥೆಯು ಈ ಪ್ರತಿಮೆಯ ಜತೆ ಅನ್ಯೋನ್ಯ ವಾಗಿ ಛಾಪು ಮೂಡಿಸಲಿದೆ ಎಂದು ಅವರು ಬಣ್ಣಿಸಿದರು.

 ಮೈಸೂರಿನಿಂದ ತರಿಸಿದ ಕೆಂಪೇಗೌಡ ಪೇಟ:

ಪ್ರಧಾನಿ ನರೇಂದ್ರ ಮೋದಿ ಅವರಿಗೆ  ತೊಡಿಸಿದ ಕೆಂಪೇಗೌಡ ಪೇಟವನ್ನು ಸಚಿವ ಅಶ್ವತ್ ನಾರಾಯಣ್ ಅವರು ಮೈಸೂರಿನಿಂದ ವಿಶೇಷವಾಗಿ ಮಾಡಿಸಿ ತರಿಸಿದ್ದರು. ಅದನ್ನು ನೋಡಿ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು. ಈ ಕುರಿತ ಮಾಹಿತಿಯನ್ನು ನಿರ್ಮಲಾನಂದನಾಥ ಸ್ವಾಮೀಜಿಯವರು  ಪ್ರಧಾನಿಯವರಿಗೂ ನೀಡಿದರು.

Key words: Dedication – Nadaprabhu- Kempegowda statue-Ashwath Narayan- thank

ENGLISH SUMMARY…

Unveiling of Kempe Gowda statue

Minister Narayan expresses gratitude
Bengaluru: Dr CN Ashwath Narayan, Minister and Vice- chaiperson of Kempegowda Heritage Area Development Authority expressed gratitude for all who involved in installation and worked for unveling ceremony of Kempegowda statue on Friday.

After the Prime Minister departured upon completing his public speech, Narayan approachef the large gathering and expressed the gratitude. It is estimated that over 4 lals people had gathered for the Friday’s event.

He said, “I had involved in the project since two years. Now, the unveiling of the statue has brought in a sense of satisfaction within me. I would like to thank all who joined their hands in this work including the previous Chief Minister BS Yediyurappa, Chief Minister Basavaraja Bommai who entrusted me this work and Sri Nirmalanandanatha Swamiji who guided me at every step.”

“The statue has gone into the World Book of Records for being the tallest bronze statue in the world. This would become an important land mark of the city in coming days. The statue would become synonymous with the prosperous growth of the city”, he remarked.