ಮೈಸೂರಿನಲ್ಲಿ ಡೆಡ್ಲಿ ಬೈಕ್ ವೀಲಿಂಗ್: ಕಿಡಿಗೇಡಿಗಳ ಹುಚ್ಚುಸಾಹಸಕ್ಕೆ ಭಯಭೀತರಾಗಿರುವ ಸಾರ್ವಜನಿಕರು…

ಮೈಸೂರು,ಆ,26,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಡೆಡ್ಲಿ  ಬೈಕ್ ವೀಲಿಂಗ್ ಹೆಚ್ಚುತ್ತಿದ್ದು ನಡು ರಸ್ತೆಯಲ್ಲಿ ಮಾಡುವ ಡೆಡ್ಲಿ ಸ್ಟಂಟ್ ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಇಂದು ಬೈಕ್ ಸವಾರನೊಬ್ಬ ಹಾರ್ಡಿಂಗ್ ವೃತ್ತದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ವೃತ್ತದವರೆಗೆ  ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ್ದು ಆ ದೃಶ್ಯ ಸೇರೆಯಾಗಿದೆ. ಬೈಕ್ ನಲ್ಲಿ ಕುಳಿತು ನಡು ರಸ್ತೆಯಲ್ಲಿ ಡೆಡ್ಲಿ ಸ್ಟಂಟ್ ಮಾಡ್ತಾರೆ ನಂತರ ನೋಡು ನೋಡುತ್ತಿದ್ದಂತೆ ವೀಲಿಂಗ್ ಮಾಡುತ್ತಲೇ ಮಾಯವಾಗ್ತಾರೆ. ಕಿಕ್ಕಿರಿದ ರಸ್ತೆಯಲ್ಲೆ ಕಿಡಿಗೇಡಿಗಳು ಡೆಡ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದು ಇದರಿಂದಾಗಿ ಇತರೇ ಬೈಕ್ ಸವಾರರ ಪರಿಸ್ಥಿತಿ ಪ್ರತಿ ದಿನ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ

ಒಂದೇ ಬೈಕ್ ನಲ್ಲಿ ನಾಲ್ಕು ಜನ ಸಾಗೋದು. ಬೈಕ್ ನಲ್ಲಿ ಇಬ್ಬರು ಕೂತು ಒಂದೇ ಚಕ್ರದಲ್ಲಿ ಬೈಕ್ ಓಡಿಸುದು.ಈ ಹುಚ್ಚು ಬೈಕ್ ಸ್ಟಂಟ್ ಗೆ  ಮೈಸೂರಿಗರು ಭಯಬೀತರಾಗಿದ್ದಾರೆ. ಪೋಲಿಸ್ ಇಲಾಖೆಗೂ ಕಣ್ತಪ್ಪಿಸಿ ಕಿಡಿಗೇಡಿಗಳು ಈ ಹುಚ್ಚು ಸಾಹಸ ಮಾಡುತ್ತಿದ್ದು  ಬೈಕ್ ವೀಲಿಂಗ್  ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯ ಹೇರಿದ್ದಾರೆ.

Key words: Deadly -Bike Wheeling – Mysore-fear-public