ಕೊಲೆ ಪ್ರಕರಣ: ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಮೈಸೂರು ಕೋರ್ಟ್ ತೀರ್ಪು…

ಮೈಸೂರು,ಆ,26,2019(www.justkannada.in): 2014ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಮೈಸೂರಿನ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಿದೆ.

ಪ್ರಮೋದ್ ಕುಮಾರ್ 35 ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿ. ಮೂಲತಃ ಕೊಳ್ಳೆಗಾಲದ ಪ್ರಮೋದ್  2014ರಲ್ಲಿ  ಕೃತಿಕಾದೇವಿ  ಎಂಬುವವರನ್ನ ಮೈಸೂರಿನ ಆರ್.ಟಿ ನಗರದ ಬಳಿ ಕೊಲೆ ಮಾಡಿದ್ದ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣದ ವಿಚಾರಣೆ ನಡೆದು ತೀರ್ಪು ಹೊರಬಿದ್ದಿದೆ. ಮೈಸೂರಿನ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಯಶ್ರೀಯವರು  ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರ ಮಂಜುಳಾ ಅವರು ವಾದ ಮಂಡಿಸಿದ್ದರು.

Key words: murder case-Mysore court -verdict – Death penalty