ಕಾವೇರಿ ಹೋರಾಟ: ‘ನಮ್ಮವರ’ ವಿರುದ್ಧ ದರ್ಶನ್ ಗುಡುಗು !

Promotion

ಮೈಸೂರು, ಸೆಪ್ಟೆಂಬರ್ 25, 2023 (www.justkannada.in): ಕಾವೇರಿ ಚಳವಳಿ ಕುರಿತು ನಟ ದರ್ಶನ್ ಮಾತನಾಡಿದ್ದಾರೆ.

ದರ್ಶನ್ ಮಾತು ಹರಿತವಾಗಿರುತ್ತೆ. ಕೆಟ್ಟದಾಗಿ ಮಾತನಾಡ್ತಾರೆ. ಮಾನ ಮರ್ಯಾದೆ ಇಲ್ಲ ಅವನಿಗೆ ಅಂತಾರೆ. ಆದರೆ ನನ್ನ ಮಾತು ಸತ್ಯವಾಗಿಯೇ ಇರುತ್ತದೆ. ಕಾವೇರಿ ಹೋರಾಟ ಎಂದಾಕ್ಷಣ ದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ‌ ಕಣ್ಣಿಗೆ ಕಾಣೋದಾ? ಎಂದು ಪ್ರಶ್ನಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವಿದೆ. ಆದೇಶ ಆಗುವವರೆಗೆ ನಮ್ಮವರು ಏನು ಮಾಡ್ತಿದ್ರು? ಹೋರಾಟಕ್ಕೆ ಧುಮುಕಿರುವವರು ಬಡ ಕೂಲಿ ಕಾರ್ಮಿಕರು ಎಂದ ದರ್ಶನ್ ರಾಜ್ಯ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದರ್ಶನ್, ನಾನು ಹುಟ್ಟು ರೈತ, ಈಗಲೂ ಕೃಷಿ ಮಾಡ್ತಿದ್ದೇನೆ. ಕಾವೇರಿ ನೀರು ಬಳಸಿಯೇ ಬೆಳೆ ಕೂಡ ಬೆಳೆಯುವೆ ಎಂದರು.

ಕಾವೇರಿ ಹೋರಾಟ ಬಂದಾಗಲೆಲ್ಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ? ಇತರೆ ಯಾರೂ ಕಾಣಿಸುವುದಿಲ್ಲವಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.