ಮೈಸೂರಿನಲ್ಲಿ ಡಿ.ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣಕ್ಕೆ ಆಗ್ರಹಿಸಿ ಡಿಸಿ ಮೂಲಕ ಸಿಎಂಗೆ ಮನವಿ….

ಮೈಸೂರು,ಮೇ,3,2019(www.justlkannada.in):  ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ  ಮನವಿ ಪತ್ರ ರವಾನೆ ಮಾಡಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ(ಗ್ರಾಮಾಂತರ) ಜಾಕೀರು ಹುಸೇನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಎ.ಆರ್ ಕಾಂತರಾಜು, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ವಿನೋದ್ ರಾಜ್, ಕನ್ನಡ ಹೋರಾಟಗಾರ ಡೈರಿ ವೆಂಕಟೇಶ್ ಸೇರಿ ಸದಸ್ಯರು ಮೈಸೂರಿನಲ್ಲಿ ಡಿ. ದೇವರಾಜ್ ಆರಸು  ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಹೆಚ್.ಡಿ  ಕುಮಾರಸ್ವಾಮಿಗೆ ಈ ಮನವಿ ಸಲ್ಲಿಸಿದ್ದಾರೆ. ತಲತಲಾಂತರದಿಂದಲೂ ರಾಜಕೀಯದಲ್ಲಿ ವಿದ್ಯೆಯಲ್ಲಿ  ನೌಕರಿಯಲ್ಲಿ ಅಷ್ಟಾಗಿ ಏನೇನು ಪ್ರಾತಿನಿಧ್ಯವಿಲ್ಲದಿದ್ದ ಸಮುದಾಯಗಳ ಏಳಿಗೆಗಾಗಿ ದೇವರಾಜ ಅರಸು ಅವರು ಶ್ರಮಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಬಾಬುಜಗಜೀವನ್ ರಾವ್,ಕನಕದಾಸರು, ಬಸವಣ್ಣ ಇನ್ನು ಹಲವು ಮಹನೀಯರ ಪ್ರತಿಮೆ ಇದೆ.ಆದರೆ  ಹಿಂದುಳಿದ ವರ್ಗಗಳ ಹರಿಕಾರ ಡಿ ದೇವರಾಜ್ ಅರಸು ಅವರ ಪ್ರತಿಮೆ ಇಂದಿಗೂ ನಿರ್ಮಾಣವಾಗಿಲ್ಲ. ಅದ್ದರಿಂದ ದೇವರಾಜ ಅರಸು ಅವರ ಪ್ರತಿಮೆಯನ್ನ ಮೈಸೂರಿನ ಹೃದಯಭಾಗದಲ್ಲಿ ನಿರ್ಮಾಣ ಮಾಡಬೇಕೆಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

Key words: D. Devaraj Arusu- statue – Mysore- appealed -CM