ಬಂಧನದ ಭೀತಿಯಿಂದ ಪಾರಾದ ಮೊಹಮ್ಮದ್​ ಶಮಿ

Promotion

ಕೋಲ್ಕತ್ತಾ, 10, 2019 (www.justkannada.in): ಟೀಂ ಇಂಡಿಯಾದ ವೇಗಿ​​ ಮೊಹಮ್ಮದ್​ ಶಮಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಕೋಲ್ಕತ್ತಾದ ಆಲಿಪೋರಾ​ ಕೋರ್ಟ್, 15 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು. ಒಂದು ವೇಳೆ ನಿಗದಿತ ದಿನದೊಳಗೆ ಹಾಜರಾಗದಿದ್ರೆ, ಶಮಿಯನ್ನು ಬಂಧಿಸುವಂತೆ ಅರೆಸ್ಟ್​ ವಾರೆಂಟ್​ ನೀಡಿತ್ತು.

ಇದೀಗ ಇದೇ ಕೋರ್ಟ್ ಶಮಿ ವಿರುದ್ಧ ಹೊರಡಿಸಿದ್ದ​ ಅರೆಸ್ಟ್​ ವಾರೆಂಟ್​ಗೆ ತಡೆ ನೀಡಿದೆ. ಇದರಿಂದಾಗಿ ಮೊಹಮ್ಮದ್​ ಶಮಿ ಬಂಧನ ಭೀತಿಯಿಂದ ಪಾರಾಗಿದ್ದಾರೆ.