ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಮತ್ತೆ ಅಸಮಾಧಾನ: ದೆಹಲಿಗೆ ಭೇಟಿ ನೀಡಿರುವುದಕ್ಕೆ ಕಾರಣ ಕೊಟ್ಟ ಶಾಸಕ ರೇಣುಕಾಚಾರ್ಯ…

Promotion

 

ನವದೆಹಲಿ,19,2021(www.justkannada.in):  ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ದೆಹಲಿಗೆ ತೆರಳಿ ವರಿಷ್ಠರನ್ನ ಭೇಟಿಯಾಗಿ ಚರ್ಚಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಈ ಕುರಿತು ಮಾತನಾಡಿದ್ದಾರೆ. ನಾವು ಯಾವುದೇ ಸಿಡಿ ತೆಗೆದುಕೊಂಡು ದೆಹಲಿಗೆ ಬಂದಿಲ್ಲ.ಎಲ್ಲವೂ ಊಹಾಪೂಹ. ನನಗೆ ಸಿಡಿ ಬಗ್ಗೆ ಗೊತ್ತಿಲ್ಲ. ಸಂಘಟನೆ ನಾಯಕರು ಕರೆಮಾಡಿ ದೆಹಲಿಗೆ ಬರುವಂತೆ ತಿಳಿಸಿದ್ದರು. ಹೀಗಾಗಿ ದೆಹಲಿಗೆ ಬಂದಿದ್ದೇನೆ. ವರಿಷ್ಠರನ್ನ ಭೇಟಿಯಾಗಿ ಚರ್ಚಿಸಿ ನನ್ನ ನೋವನ್ನ ಅವರ ಮುಂದೆ ವ್ಯಕ್ತಪಡಿಸಿದ್ದೇನೆ ಎಂದರು.

ಇನ್ನು ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವುದಕ್ಕ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಸಿಎಂ ಬಿಎಸ್ ವೈ ಹಾಗೂ ವರಿಷ್ಠರಿಗೆ ಹೇಳಿದ್ದವು. ಹಲವು ಶಾಸಕರು ಸಚಿವರು ಹೇಳಿದ್ದವು. ಸಚಿವ ಸ್ಥಾನದಿಂದ ತೆಗೆಯಿರಿ ಎಂದು ಬಹಿರಂಗವಾಗಿ ಹೇಳಲ್ಲ. ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ ಎಂದರು.cp-yogeshwar-minister-position-mp-renukacharya-visit-delhi

ಯೋಗೇಶ್ವರ್ ರಿಂದ ಬಿಜೆಪಿ ಅಧಿಕಾರಕ್ಕೆ ಬಂತೆದು ಹೇಳಿದರೇ ಸರಿಯಲ್ಲ. ಒಬ್ಬ ವ್ಯಕ್ತಿಯಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪಕ್ಷದ ಸಂಘಟನೆಯಿಂದ ಅಧಿಕಾರಕ್ಕೆ ಬಂದಿದೆ ಎಂದರು.

ENGLISH SUMMARY….

MLA Renukacharya expresses dissatisfaction again over giving a place in cabinet for CP Yogeshwar
New Delhi, 19, 2021 (www.justkannada.in): MLA M.P. Renukacharya has again expressed his dissatisfaction over giving a place for C.P. Yogeshwar in the cabinet.cp-yogeshwar-minister-position-mp-renukacharya-visit-delhi
He visited New Delhi to meet the party national leaders and discussed this it is learnt. “I have not brought any CD, all these are just rumours, I don’t know about any CD. I have come to Delhi because the leaders had asked me to come. I met the party leaders and expressed my pain,” he said.
“We had requested CM BSY and the party national leaders not to give C.P. Yogeshwar a place in the cabinet. We had not spoken about this openly, we had just given our opinion within the party,” he added.
Keywords: MLA Renukacharya/ dissatisfaction/ C.P. Yogeshwar/ place in cabinet/ minister

Key words: CP Yogeshwar –minister position- MP-Renukacharya- visit – Delhi.