“ರೈಲ್ವೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ”

Promotion

ಬೆಂಗಳೂರು,ಜನವರಿ,18,2021(www.justkannda.in) : ರೈಲ್ವೆ ಆಸ್ಪತ್ರೆಯ ಮುಂಚೂಣಿ ಸಿಬ್ಬಂದಿಗೆ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯದೊಂದಿಗೆ ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.jkದೇಶದಲ್ಲಿ ಮೊದಲ ಹಂತದಲ್ಲಿ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಂತಹ 30 ದಶಲಕ್ಷಕ್ಕೂ ಅಧಿಕ ಮುಂಚೂಣಿಯ ಕರೋನಾ ಯೋಧರನ್ನು ಒಳಗೊಂಡ ಕೋವಿಡ್ ಲಸಿಕೆ ಕಾರ್ಯಕ್ರಮವು ದೇಶಾದ್ಯಂತ 16.01.2021 ರಿಂದ ದೇಶದಲ್ಲೆ ಅತಿ ದೊಡ್ಡ ನಿಯೋಜನೆಯಾಗಿ ಪ್ರಾರಂಭವಾಗಿದೆ.

ಮೈಸೂರು ವಿಭಾಗವು ನೈಋತ್ಯ ರೈಲ್ವೆಯಲ್ಲಿಯೆ ಲಸಿಕೆ ಹಾಕಿದ ಮೊದಲ ರೈಲ್ವೆ ವಿಭಾಗವಾಗಿದ್ದು, ಮೈಸೂರಿನ ನೈಋತ್ಯ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ರಾಮಚಂದ್ರ ರವರು ಲಸಿಕೆಯನ್ನು ಪಡೆದ ಮೊದಲನೆಯವರಾಗಿದ್ದಾರೆ.

ಮೈಸೂರು ವಿಭಾಗದ ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಪಾಲಿಸುತ್ತಿರುವ ನಿಯಮಗಳ ಪ್ರಕಾರವೇ ಮುಂಚೂಣಿ ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ತುಂಬುವ ಅದ್ಭುತ ಕಾರ್ಯವನ್ನು ಶೀಘ್ರವಾಗಿ ನಿರ್ವಹಿಸುತ್ತಿರುವ ರೈಲ್ವೆ ಆಸ್ಪತ್ರೆ ಅಧಿಕಾರಿಗಳನ್ನು ಅಭಿನಂದಿಸಿದರು.

ಮೈಸೂರಿನಲ್ಲಿ ಇಂದು 174 ಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಪ್ರಮಾಣವನ್ನು ಪಡೆಯುವ ನಿರೀಕ್ಷೆಯಿದೆ. ಆರೋಗ್ಯ ಕಾರ್ಯಕರ್ತರಲ್ಲದೆ, ಪ್ರಯಾಣಿಕ ರೈಲುಗಳ ಗಾರ್ಡ್ ಗಳು, ಲೊಕೊ ಪೈಲಟ್‌ಗಳು, ಟಿಕೆಟ್ ತಪಾಸಣೆಯ ಪ್ರಯಾಣ ಸಿಬ್ಬಂದಿಗಳು, ಬುಕಿಂಗ್ ಕೌಂಟರ್, ಹೌಸ್ ಕೀಪಿಂಗ್ ಸಿಬ್ಬಂದಿ, ಸಹಾಯಕರು, ರೈಲ್ವೆ ಸಂರಕ್ಷಣ ದಳದ ಸಿಬ್ಬಂದಿ ಮತ್ತು ಇತರ ಆನ್‌ಬೋರ್ಡ್ ಸಿಬ್ಬಂದಿಗಳನ್ನು ಒಳಗೊಂಡ ವಿಭಾಗದ ಇತರೆ ಕಾರ್ಯಪಡೆ ಸಿಬ್ಬಂದಿಗಳನ್ನು ಮುಂಚೂಣಿ ಕೆಲಸಗಾರರೆಂದು ಪರಿಗಣಿಸಲಾಗುತ್ತದೆ ಮತ್ತು ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅಗರ್ವಾಲ್ ಅವರು ಮಾಹಿತಿ ನೀಡಿದರು.  covid,Vaccine,Program,Railway Hospital

ಮೊದಲ ದಿನ, ಸುಮಾರು 100 ಆರೋಗ್ಯ ಕಾರ್ಯಕರ್ತರು ಲಸಿಕೆ ಸ್ವೀಕರಿಸಲು ‘ಕೋವಿನ್’ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ರೋಗನಿರೋಧಕ ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕಾಗಿ ರೈಲ್ವೆ ಆಸ್ಪತ್ರೆಯಲ್ಲಿ ಸ್ವಾಗತ ಕೋಣೆ, ಕಾಯುವ ಕೋಣೆ ಮತ್ತು ಲಸಿಕೆಯ ನಂತರದ ಪ್ರತಿಕೂಲ ಪರಿಣಾಮಗಳ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ವೀಕ್ಷಣಾ ಕೊಠಡಿಗಳನ್ನು ಒದಗಿಸಲಾಗಿದೆ. ಶಿವಮೊಗ್ಗ ಟೌನ್ ನಿಲ್ದಾಣದ ಆರೋಗ್ಯ ಘಟಕವು ತನ್ನ ಮುಂಚೂಣಿಯ ಸಿಬ್ಬಂದಿಗೆ ರೋಗನಿರೋಧಕ ಅಭಿಯಾನವನ್ನು ನಾಳೆಯಿಂದ ಪ್ರಾರಂಭಿಸಲಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗ ಜನಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

key words : covid-Vaccine-Program-Railway Hospital