ಕಾಂಗ್ರೆಸ್ ಗೆ ಬರುವಂತೆ ಯತ್ನಾಳ್ ಗೆ ಆಹ್ವಾನ: ಸಿಎಂ ಇಬ್ರಾಹಿಂ ಜೆಡಿಎಸ್‌ ಸೇರ್ಪಡೆ ಕುರಿತು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಜನವರಿ,18,2021(www.justkannada.in): ಕಾಂಗ್ರೆಸ್ ಹೇಳಿದ್ದೆ ನಡಿತಿದೆ ಅಂತ ಹೇಳೊದಾದ್ರೆ ಅವರು ಆ‌ ಪಕ್ಷದಲ್ಲಿದ್ದು ಏನು ಸಾಧನೆ ಮಾಡಲು ಆಗಲ್ಲ. ಕಾಂಗ್ರೆಸ್ ಬನ್ನಿ, ಹೀಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನ ಕಾಂಗ್ರೆಸ್ ಗೆ ಬರುವಂತೆ ಆಹ್ವಾನಿಸಿದರು.jk

ಸಿದ್ಧರಾಮಯ್ಯ ಬೆಂಬಲಿಗರಿಂದ ಸರ್ಕಾರದ ಆಡಳಿತ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್  ಯತ್ನಾಳ್ ಆರೋಪ ಹಿನ್ನೆಲೆ ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಯತ್ನಾಳ್ ಅಧಿಕಾರದಲ್ಲಿದ್ದು ಅವರು ಮೂಲೆ‌ಗುಂಪಾಗಿದ್ದಾರೆ. ಅವರ ಹೇಳಿಕೆಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ‌. ಇಂದು ವಿರೋಧ ಪಕ್ಷ ಬದುಕಿದೆ.  ಆಡಳಿತ ಪಕ್ಷ ಸತ್ತಿದೆ. ಯತ್ನಾಳ್ ಮೊದಲು ಸ್ಪಷ್ಟವಾಗಿ ಹೇಳಲಿ. ಆಡಳಿತ ಪಕ್ಷದಲ್ಲಿದ್ದಾರೋ ವಿರೋಧ ಪಕ್ಷದಲ್ಲಿದ್ದಾರೋ ಅಂತ. ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮ ಮುಂದುವರೆಸಿ ಅಂತ ಚಾಟಿ ಬೀಸುತ್ತಿರೋದಕ್ಕೆ ಕೆಲಸ ನಡೆತಿದೆ. ಕಾಂಗ್ರೆಸ್ ಹೇಳಿದ್ದೆ ನಡಿತಿದೆ ಅಂತ ಹೇಳೊದಾದ್ರೆ ಅವರು ಆ‌ ಪಕ್ಷದಲ್ಲಿದ್ದು ಏನು ಸಾಧನೆ ಮಾಡಲು ಆಗಲ್ಲ. ಕಾಂಗ್ರೆಸ್ ಬನ್ನಿ ಎಂದು ಆಹ್ವಾನಿಸಿದರು.

ಸಿಎಂ ವಿರುದ್ದ ಬ್ಲಾಕ್‌ ಮೇಲ್ ಸಿಡಿ ಆರೋಪ  ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್,  ರಾಜಕಾರಣಿಗಳ ವಿರುದ್ದ ಸಿಡಿ ಬಾಂಬ್‌ ಗಳು ಸಹಜ. ನನ್ನ ವಿರುದ್ದವೇ ಗ್ರಂಥಪಾಲಕರಿಂದ ಕೋಟ್ಯಾಂತರ ರೂ ಲಂಚ ಸ್ವೀಕಾರದ ಸಿಡಿ ಬಾಂಬ್ ಸಿಡಿಸಿದ್ರು. ಹೀಗಾಗಿ ಅವರ ವೈಯುಕ್ತಿಕ ಹೇಳಿಕೆಗಳು ಅಷ್ಟು ಮಹತ್ವದ್ದಲ್ಲ ಎಂದರು.

ಸಿಎಂ ಇಬ್ರಾಹಿಂ ಜೆಡಿಎಸ್‌ ಸೇರ್ಪಡೆ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್,  ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ. ನಾವೆಲ್ಲಾ ಶೀಘ್ರದಲ್ಲೇ ಸಭೆ ಸೇರುತ್ತೇವೆ. ಮುಸ್ಲಿಂ ಲಿಜಿಸ್ಟ್ರೇಟೀವ್ ಫೋರಂ‌ನಿಂದ ಸಭೆ‌ ಸೇರುತ್ತೇವೆ ಸಭೆಯಲ್ಲಿ ಸಿಎಂ ಇಬ್ರಾಹಿಂ ಅಸಮಾಧಾನದ ಬಗ್ಗೆ ಸತ್ಯವನ್ನ ಹುಡುಕುತ್ತೇವೆ ಎಂದರು.

ಸಿಎಂ‌ ಇಬ್ರಾಹಿಂ ಎಲ್ಲೂ ಹೋಗಲ್ಲ ಅಂತ ಹಿಂದೆಯೂ ಹೇಳಿದ್ದೇನೆ.  ಈಗಲೂ ಹೇಳ್ತೀನಿ.  ಅವರು ಎಲ್ಲೂ ಹೋಗಲ್ಲ. ಅವರು ನಮ್ಮ ಜೊತೆ ಸಮಾಲೋಚನೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳಬೇಕು. ಹರಿಯುವ ನೀರನ್ನ ತಡೆಯಲು ಸಾಧ್ಯವಿಲ್ಲ. ಇಬ್ರಾಹಿಂ ಜೊತೆ ಈಗಾಗಲೇ ಸುರ್ಜಿವಾಲಾ ಮಾತನಾಡಿದ್ದಾರೆ. ಅವರಿಗೆ ಆದ ನೋವನ್ನ ಹೇಳಿಕೊಳ್ಳಲು ವಾಕ್‌ ಸ್ವಾತಂತ್ರ್ಯ ಇದೆ.  ಎಲ್ಲಿ ನೋವಾಗಿದೆ, ಎಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಕುಳಿತು ಸಮಾಲೋಚಿಸುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸಾಮಾಜಿಕವಾಗಿ ಆರ್ಥಿಕವಾಗಿ ವಾತವರಣ ಸರಿ ಇಲ್ಲ‌. ಹೀಗಿರುವಾಗ ನಾನು ನನ್ನ ವಿಚಾರದಲ್ಲಿ ಆಲೋಚನೆ ಮಾಡುವ ಬದಲು ಸಮುದಾಯದ ಬಗ್ಗೆ ಆಲೋಚನೆ ಮಾಡಬೇಕು. ಕಾಂಗ್ರೆಸ್ ತತ್ವಸಿದ್ದಾಂತಗಳಿಗೆ ಬಲ ಕೊಡುವ ಕೆಲಸ ಮಾಡಬೇಕು. ಇಬ್ರಾಹಿಂ ವಿಚಾರದಲ್ಲಿ ಮಿಸ್ ಕಮ್ಯುನಿಕೇಷನ್ ಆಗ್ತಿದೆ. ಅವರು ಮಾತನಾಡುವುದು ಒಂದು, ಹೊರಗೆ ಬರುತ್ತಿರೋದು ಮತ್ತೊಂದು ಎಂದು ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.Yatnal's -come - Congress MLA- Tanveer Sait-mysore

ಇನ್ನು ರೋಷನ್ ಬೇಗ್ ವಿಚಾರದಲ್ಲಿ ಏನೇನ್ ಆಗಿದೆ.  ಅವರಿಗೆ ಅಲ್ಲಿ ಹೋದಾಗ ಏನ್ ಸ್ಥಾನ ಮಾನ ಸಿಕ್ಕಿದೆ ಎಲ್ಲಾ ಗೊತ್ತಿರುವ ವಿಚಾರ. ಇಬ್ರಾಹಿಂ ಪಕ್ಷ ಬಿಡದಂತೆ ಮನವೊಲಿಸುತ್ತೇವೆ ಎಂದರು.

Key words: Yatnal’s -come – Congress MLA- Tanveer Sait-mysore