ಕೋವಿಡ್ ವ್ಯಾಕ್ಸಿನ್ ವಿಚಾರ: ಹಾಸನ ನಗರಸಭೆ ಕಮಿಷನರ್ ಮೇಲೆ ಹಲ್ಲೆ.

Promotion

 

ಹಾಸನ,ಸೆಪ್ಟಂಬರ್,17,2021(www.justkannada.in): ಖಾಸಗಿ ಶಾಲೆ ಮಾಲೀಕ ಹಾಗೂ ಸಿಬ್ಬಂದಿ  ಹಾಸನ ನಗರ ಸಭೆ ಕಮಿಷನರ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಹಾಸನದ ಹೇಮಾವತಿ ನಗರದಲ್ಲಿ ಈ ಘಟನೆ ನಡೆದಿದೆ.ಯತೀಂದ್ರ ಪಬ್ಲಿಕ್ ಸ್ಕೂಲ್ ಮಾಲೀಕ ಹಾಗೂ ಸಿಬ್ಬಂದಿ ವಿರುದ್ದವೇ ಹಲ್ಲೆ ಆರೋಪ ಕೇಳಿ ಬಂದಿದೆ.  ಇಂದು ಕೊರೋನಾ ಲಸಿಕೆ ಅಭಿಯಾನ ಹಿನ್ನೆಲೆ,  ಶಾಲೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನ 2ಗಂಟೆಗೆ ಕೋವಿಡ್ ಲಸಿಕೆ ನೀಡುವುದನ್ನ ನಿಲ್ಲಿಸುವಂತೆ  ಪಬ್ಲಿಕ್ ಸ್ಕೂಲ್ ಮಾಲೀಕ ಸೂಚಿಸಿದ್ದು. ಇದಕ್ಕೆ ಕಮಿಷನರ್ 6 ಗಂಟೆವರೆಗೆ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಕಮಿಷನರ್ ಮೇಲೆ ಯತೀಂದ್ರ ಪಬ್ಲಿಕ್ ಸ್ಕೂಲ್ ಮಾಲೀಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಮಿಷನರ್ ಅವರನ್ನ ರಸ್ತೆಯಲ್ಲಿ ಎಳೆದಾಡಿರುವ ಆರೋಪವೂ ಕೇಳಿ ಬಂದಿದೆ.

Key words: Covid Vaccine- Issue-Assault –Hassan- Municipal- Commissioner.