ಕಲ್ಬುರ್ಗಿ ಪಾಲಿಕೆಯಲ್ಲಿ ಮೈತ್ರಿ ಮತ್ತು ರಾಜ್ಯದಲ್ಲಿ ದೇಗುಲಗಳ ತೆರವು ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದು ಹೀಗೆ.

ಬೆಂಗಳೂರು,ಸೆಪ್ಟಂಬರ್,17,2021(www.justkannada.in): ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಬಗ್ಗೆ ಜೆಡಿಎಸ್ ಯಾವುದೇ ತೀರ್ಮಾನ ಮಾಡಿಲ್ಲ  ಸಚಿವ ಆರ್. ಅಶೋಕ್ ಬಂದು ಮಾತಾಡಿ ಹೋಗಿರುವುದಷ್ಟೇ. ಈ ವಿಚಾರವಾಗಿ ಬಿಜೆಪಿಯವರು ಯಾರೂ ಮಾತಾಡುತ್ತಿಲ್ಲ. ಹೀಗಾಗಿ ನಾವು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಎಂದು  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು,  ಮೈತ್ರಿ ಬಗ್ಗೆ ಜೆಡಿಎಸ್ ಯಾವುದೇ ತೀರ್ಮಾನ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ತೆಗೆದುಕೊಂಡ ನಿರ್ಧಾರ ಉಳಿದವರು ಸ್ವಾಗತಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸ್ಪಂದಿಸಿಲ್ಲ. ಇನ್ನು ಪಾಲಿಕೆ ವಿಚಾರದಲ್ಲಿ ಖರ್ಗೆ ತೀರ್ಮಾನ ಮಾಡ್ತಾರಾ?  ಈ ವಿಚಾರವಾಗಿ ಬಿಜೆಪಿಯವರೂ ಈಗ ಮಾತನಾಡುತ್ತಿಲ್ಲ. ಸಚಿವ ಆರ್​. ಅಶೋಕ್​ ಒಬ್ಬರೇ ಬಂದು ಮಾತನಾಡಿದ್ದಾರೆ. ಚುನಾವಣೆಯಲ್ಲಿ ಜನ ಜೆಡಿಎಸ್​ಗೆ ಹೊಸ ಸೂಚನೆ ನೀಡಿದ್ದಾರೆ. ಮೈತ್ರಿ ಬಗ್ಗೆ ನಾವು ಯಾವುದೇ ತೀರ್ಮಾನವನ್ನೂ ಮಾಡಿಲ್ಲ. ಯಾರ ಬಗ್ಗೆಯೂ ನಾವು ತಲೆ ಕೆಡಿಸಿಕೊಳ್ಳಲ್ಲ  ಎಂದರು.

ಎಲ್ಲೆಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಚರ್ಚೆ ಮಾಡಲ್ಲ. ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ 4 ಗಂಟೆ ಚರ್ಚೆ ಮಾಡಿದ್ರು. ಆದರೆ ಅವರಂತೆ ನಾವು ತೋರ್ಪಡಿಕೆಗೆ ಮಾತನಾಡುವುದಿಲ್ಲ. ವಾಜಪೇಯಿ ಸರ್ಕಾರದಲ್ಲಿ ಸೀಮೆಎಣ್ಣೆ ಬೆಲೆ ಹೆಚ್ಚಾಗಿತ್ತು. ಆಗ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದೆವು ಎಂದು  ಹೆಚ್ ಡಿ ದೇವೇಗೌಡರು ನುಡಿದರು.

ರಾಜ್ಯದಲ್ಲಿ ಅನಧಿಕೃತ ದೇವಾಲಯ ತೆರವು ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಹರದನಹಳ್ಳಿ ಮಹದೇವಮ್ಮ ದೇವಾಲಯ ತೆರವು ಹಿನ್ನೆಲೆಯಲ್ಲಿ, ಅಧಿಕಾರಿಗಳು ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲೂ ಕೆಲ ಪ್ರತಿಮೆಗಳ ತೆರವಿಗೆ ಆದೇಶ ಇದೆ. ಅನಧಿಕೃತ ದೇಗುಲ ತೆರವು ಮಾಡಲು ಆದೇಶ ನೀಡಿರಬಹುದು. ಕೋರ್ಟ್ ಆದೇಶವನ್ನು ನಾವು ತಿರಸ್ಕರಿಸುವುದಕ್ಕೆ ಆಗಲ್ಲ. ಆದರೆ ಕ್ರಮಕ್ಕೂ ಮುನ್ನ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Key words: Former Prime Minister -HD Deve Gowda – alliance – Kalburgi –city corporation