‘ಯು ಡಿಜಿಟಲ್’ ಎರಡನೇ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ.

Promotion

ಮೈಸೂರು,ಮಾರ್ಚ್,5,2022(www.justkannada.in):  ಮೈಸೂರಿನ  ‘ಯು ಡಿಜಿಟಲ್’ ಸಂಸ್ಥೆಗೆ ಎರಡನೇ ವರ್ಷದ ಸಂಭ್ರಮವಾಗಿದ್ದು ಎರಡನೇ ವರ್ಷದ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದ್ದು, ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಲರವ ಮೇಳೈಸಲಿದೆ.

ಉದ್ಯಮಿ ಮಂಜುನಾಥ್ ಒಡೆತನದ ಯು ಡಿಜಿಟಲ್ ಯೆಶ್ಟೆಲ್  ನ ಅಂಗಸಂಸ್ಥೆಯಾಗಿದ್ದು, ಕೇಬಲ್ ಕ್ಷೇತ್ರದಲ್ಲಿ ತನ್ನದೇ ಆದ ಹವಾ ಸೃಷ್ಠಿಸಿದೆ. ಎರಡನೇ ವರ್ಷದ ಸಂಭ್ರಮದಲ್ಲಿ ಓಟಿಟಿ ಉದ್ಘಾಟನೆಯಾಗಲಿದ್ದು, ವಾರ್ಷಿಕೋತ್ಸವ ಸಮಾರಂಭಕ್ಕೆ ಗಣ್ಯಾತಿಗಣ್ಯರು ಸಾಕ್ಷಿಯಾಗುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಲ್.ನಾಗೇಂದ್ರ, ತನ್ವೀರ್‌ ಸೇಠ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್‌.ರಂಗನಾಥ್, ಕನ್ನಡಪ್ರಭ ಮುಖ್ಯಸ್ಥ ರವಿ ಹೆಗ್ಡೆ, ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಸಮಾರಂಭದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಬಿ.ಆರ್ ಪೂರ್ಣಿಮಾ ಅವರಿಗೆ  ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ ಟಿವಿ9 ವಾಹಿನಿಯ ನಿರೂಪಕ ಹರಿಪ್ರಸಾದ್ , ಏಷ್ಯಾನೆಟ್ ಸುವರ್ಣ ನ್ಯೂಸ್ ನ ಭಾವನ ನಾಗಯ್ಯ, ನ್ಯೂಸ್ ಫಸ್ಟ್ ವಾಹಿನಿಯ ನಿಖಿಲ್ ಜೋಶಿ, ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್, ದಿಗ್ವಿಜಯ ನ್ಯೂಸ್ ನ ರಕ್ಷಿತ್ ಶೆಟ್ಟಿ,  ಕಸ್ತೂರಿ ನ್ಯೂಸ್ ನ ಮನೋಜ್ ಕುಮಾರ್ ಅವರಿಗೆ ಸನ್ಮಾನ ಮಾಡಲಾಗುತ್ತಿದೆ.

Key words: countdown – ‘U Digital’- second year- celebration.