ಬಿಎಸ್ ವೈ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ: ಹಾಡಿಹೊಗಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಶಿವಮೊಗ್ಗ, ಮಾರ್ಚ್,5,2022(www.justkannada.in): ಬಿಎಸ್ ವೈ ಬಗ್ಗೆ ಮಾತನಾಡುವುದು ಸೂರ್ಯನಿಗೆ ದೀಪ ಹಿಡಿದಂತೆ. ಬಿಎಸ್ ವೈ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ  ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಡಿಹೊಗಳಿದರು.

ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಬಿಎಸ್ ಯಡಿಯೂರಪ್ಪ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.  ಬಿಎಸ್ ಜತೆ ಕೆಲಸ ಮಾಡಿರುವುದು ನನ್ನ  ಪೂರ್ವ ಜನ್ಮದ ಪುಣ್ಯ.  ರಾಜ್ಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದರು.

ಬಿಎಸ್ ವೈ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ.   ನಿಮ್ಮೆಲ್ಲರ ಆಶೀರ್ವಾದ ಬಿಎಸ್ ವೈ ಮೇಲೆ ಇರಲಿ.  ಜನರ ಮನದಲ್ಲಿ ಬಿಎಸ್ ವೈ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂತಹ ನಾಯಕ ನಮಗೆ ಸಿಗಲ್ಲ ಎಂದು ಸಿಎಂ ಬೊಮ್ಮಾಯಿ ಗುಣಗಾನ ಮಾಡಿದರು.

Key words: BS yeddyurppa-cm-Basavaraj bommai