ಹಣ ಕೊಟ್ಟ್ರೆ ಎಲ್ಲಾ ಸಲೀಸು : ಕರ್ನಾಟಕ-ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ಎಗ್ಗಿಲ್ಲದೆ ನಡೆಯಿತ್ತಿದೆ ಪೊಲೀಸರ ವಸೂಲಿ ದಂಧೆ.

ಮೈಸೂರು, ಮೇ 08, 2019 : (www.justkannada.in news) ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಸಮೀಪದ ಅಂತರಸಂತೆ ಉಪಠಾಣೆಯ ಚೆಕ್‌ಪೋಸ್ಟ್‌ನಲ್ಲಿ ನಿತ್ಯ ನಡೆಯುತ್ತೆ ವಸೂಲಿ ದಂಧೆ. ಪೊಲೀಸರಿಂದಲೇ ನಡೆಯುವ ವಸೂಲಿ ದಂಧೆ ಕಿರುಕುಳದಿಂದ ವಾಹನ ಸವಾರರು ಹೈರಾಣು.

ಕೇರಳಕ್ಕೆ ತೆರಳುವ ವಾಹನಗಳೇ ಈ ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರ ಟಾರ್ಗೇಟ್. ವಾಹನದಲ್ಲಿ ಏನು ಸಾಗಿಸಿದ್ರು ಅನ್ನೊದಕ್ಕಿಂತ ಎಷ್ಟು ದುಡ್ಡು ಕೊಟ್ರು ಅನ್ನೋದೆ ಮುಖ್ಯ. ವಾಹನದಲ್ಲಿ ಕಳ್ಳತನದ ಮಾಲು ಸಾಗಿಸಿದ್ರು ಡೋಂಟ್ ವರಿ. ಪೊಲೀಸರ ಕೈ ಬಿಸಿ ಮಾಡಿದ್ರೆ ಸಾಕು, ವಾಹನ ಗಡಿ ದಾಟುವುದು ನೀರು ಕುಡಿದಷ್ಟೇ ಸುಲಭ.

ಅಕ್ರಮವಾಗಿ ಏನ್ ಬೇಕಾದ್ರು ಸಾಗಿಸಿ, ಹಣ ಕೊಡಿ ಸಾಕಷ್ಟೇ. ಒಂದೇ ಕಡೆ ಕಳೆದ ಹಲವಾರು ವರ್ಷಗಳಿಂದ ಬೀಡುವಿಟ್ಟಿರುವ ಪೊಲೀಸ್ ಸಿಬ್ಬಂದಿಯಿಂದ ಕೃತ್ಯ. ಪ್ರಭಾವ ಬಳಸಿ ಎಚ್.ಡಿ ಕೋಟೆ ವ್ಯಾಪ್ತಿಯಲ್ಲೇ ಸೇವೆ ಮುಂದುವರಿಕೆ. ವಸೂಲಿ ಬಗ್ಗೆ ಚಕ್ಕಾರ ಎತ್ತಿದ್ರೆ ಅವರ ವಿರುದ್ಧವೇ ಬೀಳತ್ತೆ ಕೇಸ್. ವಸೂಲಿ ದಂಧೆಯ ಕರಾಳ ಮುಖ ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿ ಪೊಲೀಸಪ್ಪನ ಬಣ್ಣ ಬಯಲು.

ಕೋಳಿ, ತರಕಾರಿ, ಅಕ್ಕಿ ತುಂಬಿದ ಲಾರಿಗಳೇ ಈತನ ಟಾರ್ಗೆಟ್. ನೇರವಾಗಿ ಬಂದು ಹಣ ಕೊಡದಿದ್ರೆ ನೆಕ್ಷ್ಟ್ ಟೈಂ ನಿಮಗಿಲ್ಲ ಎಂಟ್ರಿ. ಚೆಕ್ ಪೋಸ್ಟ್ ಹೊರಗೆ ನಿಮ್ಮ ಗಾಡಿ ನಿಲ್ಲುವಂತೆ ಮಾಡ್ತಾನೆ ಈ ಪೊಲೀಸ್ ಎಂಬ ಆರೋಪ ಕೇಳಿ ಬಂದಿದೆ.

 

corrupt police person working in antharasanthe, near karnataka-kerala check post border mysore.